ಕುವೈತ್: ಮನೆಯಿಂದ ಹೊರ ಹೋಗಿದ್ದ ‘ಸಾಕುಪ್ರಾಣಿ’ಯೊಂದನ್ನು ಮಹಿಳೆಯೊಬ್ಬರು ಮರಳಿ ಮನೆಗೆ ಕರೆತರುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಆದರೆ ಮಹಿಳೆಯ ಕೈಯಲ್ಲಿರುವುದು ಸಾಮಾನ್ಯ ಸಾಕುಪ್ರಾಣಿಯಲ್ಲ, ಕಾಡಿನ ರಾಜ ಸಿಂಹ !
ಕುವೈತ್ ನಗರದ ಬೀದಿಯಲ್ಲಿ ಮಹಿಳೆಯೊಬ್ಬಳು ತನ್ನ ತೋಳುಗಳಲ್ಲಿ ಬೆಕ್ಕನ್ನು ಕೊಂಡೊಯ್ಯುವ ರೀತಿಯಲ್ಲಿ ಕಾಡಿನ ರಾಜ ಸಿಂಹವನ್ನು ಹೊತ್ತು ಸಾಗುತ್ತಿರುವುದು ವೀಡಿಯೋದಲ್ಲಿ ದಾಖಲಾಗಿದೆ. ಮನೆಯಲ್ಲಿ ಸಾಕಿದ್ದ ಸಿಂಹವು ಬೋನಿನಿಂದ ತಪ್ಪಿಸಿಕೊಂಡು ಕುವೈತ್’ನ ಸಬಾಹಿಯಾ ವಸತಿ ಪ್ರದೇಶದಲ್ಲಿ ಅಡ್ಡಾಡುವ ಮೂಲಕ ಕೆಲಕಾಲ ಆತಂಕದ ವಾತಾವರಣವನ್ನು ಸೃಷ್ಟಿಸಿತ್ತು. ಬಳಿಕ ಹಿಜಾಬ್ ಧರಿಸಿದ ಮಹಿಳೆಯೊಬ್ಬರು ತನ್ನ ತೋಳುಗಳಲ್ಲಿ ಸಿಂಹವನ್ನು ಹೊತ್ತುಕೊಂಡು ಬೀದಿಯಲ್ಲಿ ನಡೆದು ಹೋಗುತ್ತಿರುವ ಹಾಗೂ ಸಿಂಹವು ಮಹಿಳೆಯಿಂದ ಬಿಡಿಸಿಕೊಳ್ಳಲು ಯತ್ನಿಸಿ, ಗರ್ಜಿಸುತ್ತಿರುವ ದೃಶ್ಯ ವೀಡಿಯೋದಲ್ಲಿದೆ.
ಸಿಂಹ – ಚಿರತೆ- ಹುಲಿಗಳನ್ನು ಸಾಕುಪ್ರಾಣಿಗಳಾಗಿ ಇಟ್ಟುಕೊಳ್ಳುವುದು ಕುವೈತ್’ನ ಮೂಲ ನಿವಾಸಿಗಳ ಪ್ರಮುಖ ಹವ್ಯಾಸಗಳಲ್ಲಿ ಒಂದಾಗಿದೆ.