ರಾತ್ರಿ ಕಾರಿನಲ್ಲಿ ಬಂದು ಹೆತ್ತ ತಾಯಿಯನ್ನು ಬಿಟ್ಟು ಹೋದ ಮಗಳು: ರಾತ್ರಿಯಿಡೀ ಚಳಿಗೆ ನಡುಗಿದ ವೃದ್ಧೆ!

Prasthutha|

ಬೆಂಗಳೂರು: ರಾತ್ರಿಯ ವೇಳೆ ಕಾರಿನಲ್ಲಿ ಬಂದು ಹೆತ್ತ ತಾಯಿಯನ್ನು ದೇವಸ್ಥಾನದ ಬಳಿ ನಡುರಸ್ತೆಯಲ್ಲಿ ಮಗಳೊಬ್ಬಳು ಬಿಟ್ಟು ಹೋದ ಕರುಣಾಜನಕ ಘಟನೆ ಬೆಂಗಳೂರಿನ ಆನೇಕಲ್‌ನ ಸರ್ಜಾಪುರದ ವಿ. ಕಲ್ಲಹಳ್ಳಿಯಲ್ಲಿ ನಡೆದಿದೆ. ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.

- Advertisement -

ಮಾನಸಿಕವಾಗಿ ಮತ್ತು ದೈಹಿಕವಾಗಿ ನಡುಗಿದ ವೃದ್ಧೆಗೆ ಅಂದಾಜು 80 ವರ್ಷ. ವೃದ್ಧೆಯನ್ನು ಕಾರಿನಲ್ಲಿ ಬಂದ ಮಗಳು ಹಾಗೂ ಅಳಿಯ ದೇವಸ್ಥಾನದ ಬಳಿ ಮಲಗಿಸಿ ಹೋಗಿದ್ದಾರೆ. ಬೆಳಗಾಗುವವರೆಗೂ ಚಳಿಗೆ ವೃದ್ಧೆ ನಡುಗಿಹೋಗಿದ್ದಾರೆ.

ದೈಹಿಕವಾಗಿ ನಿತ್ರಾಣಗೊಂಡಿದ್ದ ವೃದ್ಧೆಯನ್ನು ಸ್ಥಳೀಯ ಗ್ರಾಮಸ್ಥರು ರಕ್ಷಣೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರಾದ ಅನಿಲ್ ಕುಮಾರ್ ಈ ಕುರಿತು ಮಾತನಾಡಿದ್ದು, ಬೆಳಿಗ್ಗೆ ನಾವು ನೋಡಿದಾಗ ವೃದ್ದೆ ದೇವಸ್ಥಾನದ ಬಳಿ ಮಲಗಿದ್ದರು. ಚಳಿಗೆ ಅವರು ತುಂಬಾ ನಡುಗುತ್ತಿದ್ದರು. ನಾವು ಅವರನ್ನು ಮಾತನಾಡಿಸಿದಾಗ ಅವರು ತನ್ನ ಮಗಳು ಆಶಾ ರಾಶಿ ಮತ್ತು ಅಳಿಯ ಮಂಜುನಾಥ್ ನನ್ನನ್ನು ಕಾರಿನಲ್ಲಿ ಕರೆದುಕೊಂಡು ಬಂದು ಬಿಟ್ಟು ಹೋಗಿದ್ದಾರೆ. ನನ್ನನ್ನು ರಾತ್ರಿಯಲ್ಲಿ ಮಗಳು ಅಳಿಯ ಥಳಿಸಿದ್ದಾರೆ. ನಮ್ಮ ಮನೆ ದೊಮ್ಮಸಂದ್ರದಲ್ಲಿ ಇದೆ. ಮಗಳು ಕೆಲಸಕ್ಕೆ ಹೋಗುತ್ತಾಳೆ. ಕಾಲಿಗೆ ಏಟಾಗಿದೆ ನೋಡಿ ಎಂದು ವೃದ್ಧೆ ಕಣ್ಣೀರು ಹಾಕಿದ್ದಾರೆ ಎಂದು ವೃದ್ಧೆ ಕಣ್ಣೀರು ಹಾಕಿದ್ದಾರೆಂದು ಹೇಳಿದ್ದಾರೆ.

- Advertisement -

ಗಮನಕ್ಕೆ ಬಂದ ಕೂಡಲೇ ಗ್ರಾಮಸ್ಥರು ಅಜ್ಜಿಗೆ ಊಟ, ನೀರು ಕೊಟ್ಟು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ವೃದ್ಧೆಯನ್ನು ಆಶ್ರಮಕ್ಕೆ ಆಕೆಯನ್ನು ಕರೆದೊಯ್ಯಲಾಗಿದೆ ಎಂದು ಅನಿಲ್ ಕುಮಾರ್ ತಿಳಿಸಿದ್ದಾರೆ.

Join Whatsapp