ಮರ ಬಿದ್ದು ಮೃತಪಟ್ಟ ಹುಡುಗನ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಚೆಕ್ ವಿತರಣೆ

Prasthutha|

ಬೆಂಗಳೂರು: ನಗರದ ಪೂರ್ವ ವಲಯ ವ್ಯಾಪ್ತಿಯಲ್ಲಿ ಜೂನ್ 3ರಂದು ಸಂಜೆ 6 ರಿಂದ 6.30ರ ವೇಳೆ ಮಳೆ ಬೀಳುವ ಸಮಯದಲ್ಲಿ ಮರದ ಕೆಳಗೆ ನಿಂತಿದ್ದ ವೇಳೆ 13 ವರ್ಷದ ರಾಕೇಶ್ ತಲೆಯ ಮೇಲೆ ಮರದ ಕೊಂಬೆ ಬಿದ್ದು, ಪೆಟ್ಟು ಬಿದ್ದ ಕಾರಣ ಜನಪ್ರಿಯ ನರ್ಸಿಂಗ್ ಹೋಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಜೂ.8ರಂದು ಮುಂಜಾನೆ 1.30ರ ವೇಳೆಗೆ ಮೃತಪಟ್ಟಿದ್ದರು.

- Advertisement -

ಈ ಸಂಬಂಧ ಪೂರ್ವ ವಲಯ ವ್ಯಾಪ್ತಿಯಲ್ಲಿ ನಡೆದ “ಮುಖ್ಯ ಆಯುಕ್ತರ ನಡೆ ವಲಯದ ಕಡೆ” ಯಲ್ಲಿ ಮರದ ಕೊಂಬೆಯಿಂದ ಮೃತಪಟ್ಟಿರುವ ಘಟನೆ ತಿಳಿದ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ಕೂಡಲೆ ಪರಿಹಾರ ನೀಡಲು ವಲಯ ಆಯುಕ್ತರಿಗೆ ಸೂಚನೆ ನೀಡಿದ್ದರು. ಅದರಂತೆ ಇಂದು ಪಾಲಿಕೆ ಕೇಂದ್ರ ಕಚೇರಿಯಲ್ಲಿ ಪೂರ್ವ ವಲಯ ಆಯುಕ್ತರು ಹಾಗೂ ಯೋಜನಾ ವಿಭಾಗದ ವಿಶೇಷ ಆಯುಕ್ತರಾಗಿರುವ ಪಿ.ಎನ್.ರವೀಂದ್ರ ಅವರು ರಾಕೇಶ್ ಪೋಷಕರಾದ ತಂದೆ ಸರವಣ್ಣ, ತಾಯಿ ಯಮುನಾ ರವರಿಗೆ 5 ಲಕ್ಷ ರೂ. ಪರಿಹಾರದ ಚೆಕ್ ಅನ್ನು ನೀಡಿದರು

Join Whatsapp