ಮಂಡ್ಯದ 5 ರೂಪಾಯಿ ವೈದ್ಯ  ಡಾ. ಶಂಕರೇಗೌಡರಿಗೆ  “ಇಂಡಿಯನ್ ಆಫ್ ದಿ ಇಯರ್ 2022” ಪ್ರಶಸ್ತಿ

Prasthutha|

ಬೆಂಗಳೂರು: 5 ರೂಪಾಯಿ ಡಾಕ್ಟರ್ ಎಂದು ಪ್ರಖ್ಯಾತರಾಗಿರುವ ಮಂಡ್ಯದ ಡಾ. ಶಂಕರೇಗೌಡರಿಗೆ ಸಾಮಾಜಿಕ ಬದಲಾವಣೆ ವಿಭಾಗದಲ್ಲಿ ಸಿಎನ್ಎನ್-ನ್ಯೂಸ್ 18 ವತಿಯಿಂದ ಇಂಡಿಯನ್ ಆಫ್ ದಿ ಇಯರ್ 2022 ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

- Advertisement -

ದೆಹಲಿಯಲ್ಲಿ ಬುಧವಾರ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಶಂಕರೇಗೌಡರಿಗೆ ಪ್ರಶಸ್ತಿ ನೀಡಿದರು.

ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ ಡಾ.ಗೌಡರು, ದೇಶದ ಗ್ರಾಮೀಣ ಭಾಗಗಳಲ್ಲಿ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆಯ ಕೊರತೆಯನ್ನು ಎತ್ತಿ ತೋರಿಸಿದರು.

- Advertisement -

ನಾನು 1982 ರಲ್ಲಿ ನನ್ನ ವೃತ್ತಿ ಜೀವನ ಪ್ರಾರಂಭಿಸಿದಾಗಿನಿಂದ ಅಂದರೆ 40 ವರ್ಷಗಳಿಂದ ಕೇವಲ 5 ರೂ. ಗೆ ಚಿಕಿತ್ಸೆ ನೀಡುತ್ತಿದ್ದೇನೆ. ನಮ್ಮಲ್ಲಿ ಯಾವುದೇ ಜ್ಞಾನವಿದ್ದರೂ ಅದನ್ನು ಎಲ್ಲರಿಗೂ ಸಮಾನವಾಗಿ ನೀಡಬೇಕು  ಎಂದು ಅವರು ಹೇಳಿದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, 5 ರೂಪಾಯಿ ಡಾಕ್ಟರ್ ಎಂದೇ ಪ್ರಖ್ಯಾತಿಗಳಿಸಿರುವ ಮಂಡ್ಯದ ವೈದ್ಯ ಶಂಕರೇಗೌಡರಿಗೆ ಪ್ರಶಸ್ತಿ ಲಭಿಸಿರುವುದು ಅತ್ಯಂತ ಅಭಿನಂದನಾರ್ಹ ಸಂಗತಿಯಾಗಿದೆ. ಗ್ರಾಮೀಣ ಭಾಗದ ಜನರ ಸೇವೆಗಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟ ಅವರ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಿದೆ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.

Join Whatsapp