ಬೈಕ್ ಎಮ್ಮೆಗೆ ಆಕಸ್ಮಿಕ ಡಿಕ್ಕಿಯಾದ ಕಾರಣಕ್ಕೆ 16 ವರ್ಷದ ಬಾಲಕನನ್ನು ಥಳಿಸಿ ಹತ್ಯೆ

Prasthutha|

ಜಾರ್ಖಂಡ್: ದುಮ್ಕಾ ಜಿಲ್ಲೆಯಲ್ಲಿ ಪ್ರಯಾಣಿಸುತ್ತಿದ್ದ ಬೈಕ್ ಆಕಸ್ಮಿಕವಾಗಿ ಎಮ್ಮೆಗೆ ಡಿಕ್ಕಿಯಾದ ಕಾರಣಕ್ಕೆ 16 ವರ್ಷದ ಬಾಲಕನನ್ನು ಜನರ ಗುಂಪೊಂದು ಕ್ರೂರವಾಗಿ ಥಳಿಸಿ ಕೊಂದು ಹಾಕಿದೆ.

- Advertisement -

ಸಂತಾಲಿ ತೊಲದ ಕುರ್ಮಹತ್ನ ನಿವಾಸಿಯಾಗಿರುವ ಬಾಲಕ ಸಂಜೆ ಫುಟ್ಬಾಲ್ ಪಂದ್ಯವನ್ನು ವೀಕ್ಷಿಸಿದ ನಂತರ ಮೂವರು ಸ್ನೇಹಿತರೊಂದಿಗೆ ಬೈಕ್ ಹತ್ತಿ ಮನೆಗೆ ಹಿಂದಿರುಗುತ್ತಿದ್ದನು. ಹನ್ಸ್ದಿಹಾ ಪೊಲೀಸ್ ಠಾಣೆ ವ್ಯಾಪ್ತಿಯ ಥಥಿ ಗ್ರಾಮದಲ್ಲಿ ಆತನ ಬೈಕ್ ಆಕಸ್ಮಿಕವಾಗಿ ಎಮ್ಮೆಯೊಂದಕ್ಕೆ ಡಿಕ್ಕಿ ಹೊಡೆದಿದೆ.  ಈ ವೇಳೆ, ಬಾಲಕರು ಮತ್ತು ಎಮ್ಮೆಗಳ ಹಿಂಡಿನ ಜೊತೆಯಲ್ಲಿದ್ದವರ ನಡುವೆ ವಾಗ್ವಾದ ನಡೆದಿದೆ. ಬಾಲಕ ಸಂತ್ರಸ್ತ ಎಮ್ಮೆಯ ಮಾಲೀಕರಿಗೆ ಪರಿಹಾರ ನೀಡಲು ಸಹ ಒಪ್ಪಿಕೊಂಡಿದ್ದಾನೆ. ಆದರೆ, ನಾಲ್ವರು ಅವನ ಮೇಲೆ ಮಾರಣಾಂಕಿವಾಗಿ ಹಲ್ಲೆ ನಡೆಸಿದ್ದಾರೆ ಎಂದು
ತೀವ್ರ ಬಾಲಕನನ್ನು  ಸರಯ್ಯಹತ್ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಿದರೂ  ಅಲ್ಲಿ ಆತ ಮೃತಪಟ್ಟಿದ್ದಾನೆ ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ ಅಮೋದ್ ನಾರಾಯಣ ಸಿಂಗ್ ಹೇಳಿದ್ದಾರೆ.

ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಸ್ಥಳೀಯರು ಗ್ರಾಮದ ಬಳಿ ರಸ್ತೆ ತಡೆ ನಡೆಸಲಾಗಿದೆ. ಎರಡು ದಿನಗಳಲ್ಲಿ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ಭರವಸೆ ನೀಡಿದ ಪ್ರತಿಭಟನೆ ವಾಪಸ್ ತೆಗೆದುಕೊಳ್ಳಲಾಗಿದೆ.

Join Whatsapp