ಟಿವಿಯಲ್ಲಿನ ದ್ವೇಷ ಭಾಷಣಗಳು ನಿಧಾನವಾಗಿ ಕೊಲ್ಲುವಂತಿದೆ: ಸುಪ್ರೀಮ್ ಕೋರ್ಟ್

Prasthutha|

ನವದೆಹಲಿ: ಟಿವಿಯಲ್ಲಿ ಪ್ರಸಾರವಾಗುವ ದ್ವೇಷ ಭಾಷಣಗಳು ಜನರನ್ನು ನಿಧಾನವಾಗಿ ಕೊಲ್ಲುವಂತಿದೆ ಎಂದು ಹೇಳಿದ ಸುಪ್ರೀಮ್ ಕೋರ್ಟ್, ಇದರಲ್ಲಿ ನಿರೂಪಕರ ಪಾತ್ರ ಬಹಳಷ್ಟಿಸಿದೆ ಎಂದು ಕಿಡಿ ಕಾರಿದೆ.

- Advertisement -

ಮುಖ್ಯವಾಹಿನಿಯ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ಭಾಷಣಗಳು ವ್ಯಾಪಕವಾಗಿ ಹರಡುತ್ತಿವೆ. ಯಾವುದೇ ವ್ಯಕ್ತಿ ದ್ವೇಷಭಾಷಣವನ್ನು ಪ್ರಚಾರಪಡಿಸುತ್ತಿರುವಾಗ ಅದು ಹೆಚ್ಚು ಸಮಾಜದಲ್ಲಿ ಪಸರಿಸದಂತೆ ನೋಡಿಕೊಳ್ಳುವ ಹೊಣೆ ಟಿವಿ ನಿರೂಪಕನದ್ದಾಗಿದೆ. ಭಾರತವು ಮುಂದುವರಿದ ಅಮೆರಿಕದಷ್ಟು ಸ್ವತಂತ್ರಗೊಂಡಿಲ್ಲ. ಅದರೆ ಎಲ್ಲಿ ಪೂರ್ಣ ವಿರಾಮ ಹಾಕಬೇಕೆಂದು ನಮಗೆ ತಿಳಿದಿರಬೇಕು ಎಂದು ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ತಿಳಿಸಿದ್ದಾರೆ.



Join Whatsapp