ಮಂಗಳೂರು | ಮಾದಕ ವಸ್ತು ಮಾರಾಟ: ವಿದೇಶಿ ಪ್ರಜೆಯ ಬಂಧನ

Prasthutha|

ಮಂಗಳೂರು: ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ವಿದೇಶಿ ಪ್ರಜೆಯೊಬ್ಬನನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಸೌತ್ ಸೂಡನ್ ನ ನಿವಾಸಿ, ಲೂಯಲ್ ಡೇನಿಯಲ್ ಜಸ್ಟೀನ್ ಬೌಲೋ ಯಾನೆ ಡ್ಯಾನಿ ಬಂಧಿತ ವ್ಯಕ್ತಿಎಂದು ತಿಳಿದು ಬಂದಿದೆ.


ಸಿಸಿಬಿ ಪೊಲೀಸರು ಜೂನ್ ನಲ್ಲಿ ಪಡೀಲ್ ಬಳಿ ಓರ್ವ ಮಹಿಳೆ ಸೇರಿದಂತೆ ನಾಲ್ಕು ಜನರನ್ನು ಬಂಧಿಸಿ 125 ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದರು. ಬಳಿಕ ತನಿಖೆ ಕೈಗೊಂಡ ಪೊಲೀಸರು ಈ ಹಿಂದೆ ಆರೋಪಿಗಳಿಗೆ ಮಾದಕ ವಸ್ತುವನ್ನು ಮಾರಾಟ ಮಾಡಿದ್ದ ಆರೋಪದ ಮೇಲೆ ಇಂದು ಡ್ಯಾನಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

- Advertisement -