ಹಣದಾಸೆಗೆ ಮಗು ಮಾರಾಟ; ಪೋಷಕರ ಬಂಧನ

Prasthutha|

ಚಾಮರಾಜನಗರ: ಹಣದಾಸೆಗೆ ಮಗುವನ್ನು ಮಾರಾಟ ಮಾಡಿದ್ದ ಪ್ರಕರಣಕ್ಕೆ ಸಂಬoಧಿಸಿಮಗುವಿನ ಪೋಷಕರನ್ನು ನಗರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

- Advertisement -


ಬಸಪ್ಪ (35) ಮತ್ತು ಆತನ ಪತ್ನಿ ನಾಗವೇಣಿ ಎಂಬಾಕೆಯನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮತ್ತು ನಗರ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ತಮ್ಮ ಎರಡನೇ ಮಗುವನ್ನು ಬಸಪ್ಪ ಗಾಳೀಪುರದ ವ್ಯಕ್ತಿಯೊಬ್ಬನ ಮೂಲಕ ಬೆಂಗಳೂರಿನ ವ್ಯಕ್ತಿಗೆ 50 ಸಾವಿರ ರೂ.ಗೆ 6 ದಿನಗಳ ಹಿಂದೆ ಮಾರಾಟ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.


ಪತ್ನಿ ನಾಗವೇಣಿಗೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ತನಗೆ ಸಾಲದ ಹೊರೆ ಇದೆ. ಆದ್ದರಿಂದ ಮಗು ಮಾರಾಟ ಮಾಡೋಣ ಎಂದು ಬಸಪ್ಪ ಪತ್ನಿಯನ್ನು ಒತ್ತಾಯಿಸಿದ್ದು, ಇದಕ್ಕೆ ಪತ್ನಿ ಒಪ್ಪದಿದ್ದಾಗ ತಾನು ಮನೆ ಬಿಟ್ಟು ಹೋಗುವುದಾಗಿ ಬೆದರಿಕೆ ಹಾಕಿ ಮಗುವನ್ನು ಮಾರಾಟ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

- Advertisement -

ದಂಪತಿಗೆ 7 ವರ್ಷದ ಒಬ್ಬ ಮಗನಿದ್ದು, ಒಂದು ದಿನಗಳ ಹಿಂದೆ ನಾಗವೇಣಿ ಎರಡನೇ ಗಂಡು ಮಗುವಿಗೆ ಜನ್ಮವಿತ್ತಿದ್ದಳು. ಹೆರಿಗೆಯಾಗಿ ಮನೆಗೆ ಬಂದ 28 ದಿನಗಳಲ್ಲೇ ಬಸಪ್ಪ ತನ್ನ ಜೊತೆ ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದ ಗಾಳೀಪುರದ ವ್ಯಕ್ತಿಯೊಬ್ಬನನ್ನು ಕರೆತಂದು ಮೊಬೈಲ್‌ನಲ್ಲಿ ಮಗುವಿನ ಫೋಟೋ ತೆಗೆದುಕೊಂಡು ಹೋಗಿದ್ದ. ನಾಲ್ಕೆದು ದಿನಗಳ ನಂತರ ದಂಪತಿಯನ್ನು ಗಾಳೀಪುರದ ಮನೆಯೊಂದಕ್ಕೆ ಕರೆಸಿಕೊಂಡು ಮಗುವನ್ನು ಬೆಂಗಳೂರಿನ ವ್ಯಕ್ತಿಗೆ ಮಾರಾಟ ಮಾಡಲಾಯಿತು. ಬಸಪ್ಪನಿಗೆ 50 ಸಾವಿರ ರೂ. ನೀಡಲಾಗಿದೆ ಎಂದು ಮಹಿಳಾ ರಕ್ಷಣಾ ಘಟಕದ ಅಧಿಕಾರಿ ಕುಮಾರ್ ತಿಳಿಸಿದ್ದಾರೆ.



Join Whatsapp