ಮಧ್ಯಪ್ರದೇಶ: ರೇವಾ ಜಿಲ್ಲೆಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರದ ಆರೋಪಿಗಳ ನಿವಾಸವನ್ನು ಬುಲ್ಡೋಝರ್ ಮೂಲಕ ನೆಲಸಮಗೊಳಿಸಲಾಗಿದೆ.
ಅಷ್ಟಭುಜ ಮಂದಿರದ ಎದುರಿನಲ್ಲಿರುವ ಕಾಡಿನಲ್ಲಿ ಭಾವಿ ಪತಿಯ ಎದುರೇ 17 ಹರೆಯದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಲಾಗಿತ್ತು. ವರ ಮತ್ತು ವಧುವಿನ ಕಡೆಯವರು ಒಟ್ಟಾಗಿ ದೇವಾಲಯಕ್ಕೆ ತೆರಳಿದ್ದ ವೇಳೆ ಈ ದುರ್ಘಟನೆ ನಡೆದಿತ್ತು ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದು, ಸದ್ಯ ಅವರ ಮನೆಗಳ ಮೇಲೆ ಬುಲ್ಡೋಝರ್ ದಾಳಿ ನಡೆಸಿ ನೆಲಸಮಗೊಳಿಸಲಾಗಿದೆ.