ಕೊಡಗು: ಗೌರಿ ಗಣೇಶೋತ್ಸವದ ಮೆರವಣಿಗೆಯಲ್ಲಿ ಅಂಬೇಡ್ಕರ್ ಫೋಟೋದೊಂದಿಗೆ ರಾರಾಜಿಸಿದ ನೀಲಿ ಬಾವುಟ

Prasthutha|

ಮಡಿಕೇರಿ: ಗೌರಿ ಗಣೇಶೋತ್ಸವದ ಮೆರವಣಿಗೆಯಲ್ಲಿ ಅಂಬೇಡ್ಕರ್ ಫೋಟೋ, ನೀಲಿ ಶಾಲುಗಳು ಹಾಗೂ ನೀಲಿ ಬಾವುಟಗಳು ರಾರಾಜಿಸಿವೆ.

ವಿರಾಜಪೇಟೆ ತಾಲೂಕಿನ ಸಿದ್ದಾಪುರದ ಅಂಬೇಡ್ಕರ್ ನಗರದ ಶ್ರೀ ಸಿದ್ದಿ ವಿನಾಯಕ ಮಿತ್ರ ಮಂಡಳಿಯ 13ನೆ ವರ್ಷದ ಶ್ರೀ ಗೌರಿ ಗಣೇಶೋತ್ಸವ ಅದ್ದೂರಿಯಾಗಿ ನಡೆಯಿತು.  ಗಣಪತಿಯ ಮೂರ್ತಿಯನ್ನು ಹೂವಿನ ಅಲಂಕೃತ ರಥದಲ್ಲಿರಿಸಿ, ಅಂಬೇಡ್ಕರ್ ಚಿತ್ರ ಇರುವ ಬಾವುಟದೊಂದಿಗೆ ಸಂವಿಧಾನ, ಜಾತ್ಯಾತೀತತೆ ಹಾಗೂ ಒಗ್ಗಟ್ಟನ್ನು ಸಾರುವ ಸಂಗೀತದೊಂದಿಗೆ ನೀಲಿ ಬಾವುಟದ ಜೊತೆಗೆ ಸಿದ್ದಾಪುರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಸಾಗಿತು. ಬಳಿಕ ನೆಲ್ಯಹುದಿಕೇರಿ ಕಾವೇರಿ ನದಿಯಲ್ಲಿ ವಿಸರ್ಜಿಸಲಾಯಿತು.

- Advertisement -

ಶ್ರೀ ಸಿದ್ದಿ ವಿನಾಯಕ ಮಿತ್ರ ಮಂಡಳಿಯ ಅಧ್ಯಕ್ಷರಾದ ವಿಜಯ್, ಕಾರ್ಯದರ್ಶಿ ಸಂತೋಷ್, ಪ್ರಮುಖರಾದ ಅಯ್ಯ ಗ್ರಾಮ ಪಂಚಾಯತಿ ಸದಸ್ಯರಾದ ಪಳನಿಸ್ವಾಮಿ ಸೇರಿದಂತೆ ಮತ್ತಿತರರು ಇದ್ದರು.

- Advertisement -