ನಾಲಗೆಯನ್ನೇ ತುಂಡರಿಸಿ ದೇವಿಗೆ ಅರ್ಪಿಸಿದ ಭಕ್ತ!

Prasthutha|

ಪ್ರಯಾಗ್‌ರಾಜ್: ಭಕ್ತನೊಬ್ಬ ತನ್ನ ನಾಲಗೆಯನ್ನೇ ಕೊಯ್ದು ದೇವಿಗೆ ಅರ್ಪಿಸಿದ ವಿಲಕ್ಷಣ ಘಟನೆಯೊಂದು ಇಲ್ಲಿನ ಕೌಶಾಂಬಿಯ ಕಡಧಾಮ್ ದೇವಸ್ಥಾನದಲ್ಲಿ ನಡೆದಿದೆ.

- Advertisement -

ಜಿಲ್ಲೆಯ ಪುರವ್‌ಶರೀರಾ ಗ್ರಾಮದ 40 ವರ್ಷದ ಸಂಪತ್ ಸರೋಜ್ ಎಂಬಾತನೇ ದೇವಿಗೆ ನಾಲಗೆ ಕತ್ತರಿಸಿ ಸಮರ್ಪಿಸಿದಾತ. ಕೃಷಿಕನಾಗಿರುವ ಸಂಪತ್ ಅತೀವ ದೈವಭಕ್ತನಾದ್ದ. ತನ್ನ ಪತ್ನಿ ಬಾನ್ ಪಾಟಿ ಜೊತೆ ಕಡಧಾಮ್‌ನ ‘ಮಾ ಶೀತಲಾ’ ದೇವಸ್ಥಾನಕ್ಕೆ ಆಗಮಿಸಿದ್ದ ಸಂಪತ್ ಮೊದಲು ಗಂಗಾದಲ್ಲಿ ಮುಳುಗಿ ಸ್ನಾನ ಮಾಡಿದ್ದು, ಬಳಿಕ ದೇವಸ್ಥಾನಕ್ಕೆ ಆಗಮಿಸಿ ಪೂಜೆ, ಪರಿಕರ್ಮಗಳನ್ನು ಮಾಡಿದ್ದ. ಇದರ ಕೊನೇಯಲ್ಲಿ ಸಂಪತ್ ತನ್ನ ಬಳಿ ಇದ್ದ ಬ್ಲೇಡ್‌ ಮೂಲಕ ಏಕಾ ಏಕಿ ನಾಲಗೆ ಕತ್ತರಿಸಿ ದೇವಿಗೆ ಸಮರ್ಪಿಸಿದ್ದ.

ಸಂಪತ್ ಬಾಯಿಯಲ್ಲಿ ರಕ್ತ ಸುರಿಯುತ್ತಿರುವುದನ್ನು ಕಂಡ ಪತ್ನಿ ಮತ್ತು ಇತರ ಭಕ್ತರು, ಪೊಲೀಸರಿಗೆ ಮಾಹಿತಿ ನೀಡಿದ್ದು, ಅಲ್ಲಿಂದ ಅವರನ್ನು ಮಂಜನ್‌ಪುರದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕಡಂಧಾಮ್ ಠಾಣಾಧಿಕಾರಿ ಅಭಿಲಾಷ್ ತಿವಾರಿ ಹೇಳಿದ್ದಾರೆ.

- Advertisement -

ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವ ವಿಚಾರವಾಗಿ ಅವರು ಶುಕ್ರವಾರ ಹೇಳಿಕೊಂಡಿದ್ದರು. ಈ ನಿಟ್ಟಿನಲ್ಲಿ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದ್ದೇವೆ. ಆದರೆ ಅವರು ಈ ರೀತಿ ಮಾಡುತ್ತಾರೆಂದು ನಾನು ಅಂದುಕೊಂಡಿರಲಿಲ್ಲ ಎಂದು ಸಂಪತ್ ಪತ್ನಿ ಬಾನ್ ಪಾಟಿ ಹೇಳಿದ್ದಾರೆ.



Join Whatsapp