ಲಂಡನ್: ಇತ್ತೀಚೆಗೆ ನಿಧನರಾಗಿರುವ ಎರಡನೇ ಎಲಿಝಬೆತ್ ರಾಣಿಯ ಉತ್ತರಾಧಿಕಾರಿಯಾಗಿ ಮೂರನೇ ಕಿಂಗ್ ಚಾರ್ಲ್ಸ್ ಅವರು ಆಯ್ಕೆಯಾಗಿದ್ದಾರೆ. ಶನಿವಾರ ಬ್ರಿಟನ್ ಅರಮನೆಯ ಪ್ರವೇಶ ಮಂಡಳಿಯಲ್ಲಿ ನಡೆದ ಐತಿಹಾಸಿಕ ಸಮಾರಂಭದಲ್ಲಿ ಅವರನ್ನು ನೂತನ ರಾಜನೆಂದು ಘೋಷಿಸಲಾಯಿತು.
ಜಗದೊಡೆಯನೇ ನೂತನ ರಾಜನನ್ನು ಸಂರಕ್ಷಿಸು ಎಂದು ಸಭೆಯ ಮುಖ್ಯಸ್ಥರ ಘೋಷಣೆಯನ್ನು ನೆರೆದಿದ್ದ ಮಂಡಳಿ ಸದಸ್ಯರು ಪುನರುಚ್ಚಿಸಿದರು.
ಈ ವೇಳೆ ಚಾರ್ಲ್ಸ್ ಪತ್ನಿ, ರಾಣಿ ಕಾನ್ಸಾರ್ಟ್ ಕ್ಯಾಮಿಲ್ಲಾ ಮತ್ತು ಮಗ ಪ್ರಿನ್ಸ್ ವಿಲಿಯಮ್ಸ್ ಉಪಸ್ಥಿತರಿದ್ದರು.