ನಿದ್ರೆ ಮಾಡಿ 6 ಲಕ್ಷ ರೂ. ಬಹುಮಾನ ಗೆದ್ದ ಪಶ್ಚಿಮ ಬಂಗಾಳದ ಯುವತಿ!

Prasthutha|

ನವದೆಹಲಿ: ನಿದ್ರೆ ಮಾಡಿಯೇ ಯುವತಿಯೋರ್ವಳು 6 ಲಕ್ಷ ರೂ. ಬಹುಮಾನ ಗೆದ್ದಿದ್ದಾಳೆ ಎಂದರೆ ನೀವು ನಂಬಲೇಬೇಕು.  ಪಶ್ಚಿಮ ಬಂಗಾಳದ ಹೂಗ್ಲಿಯ ಶ್ರೀರಾಂಪುರದ ತ್ರಿಪರ್ಣ ಚಕ್ರವರ್ತಿ ನಿದ್ರೆ ಮಾಡಿ ಬಹುಮಾನ ಗೆದ್ದ ಯುವತಿ. ಈಕೆ 100 ದಿನಗಳ ಕಾಲ ಸತತ 9 ಗಂಟೆ ನಿದ್ದೆ ಮಾಡಿ ದಾಖಲೆ ನಿರ್ಮಿಸಿದ್ದಾಳೆ. ರಾಷ್ಟ್ರಮಟ್ಟದಲ್ಲಿ ಈ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಭಾಗವಹಿಸಲು 4.5 ಲಕ್ಷ ಜನರು ಅರ್ಜಿ ಸಲ್ಲಿಸಿದ್ದರು. ಈ ಪೈಕಿ 15 ಸ್ಪರ್ಧಿಗಳು ಆಯ್ಕೆಯಾಗಿದ್ದರು. ಕೊನೆಗೆ ನಾಲ್ಕು ಸ್ಪರ್ಧಿಗಳು ಅಂತಿಮ ಹಂತ ತಲುಪಿದ್ದರು. ನಾಲ್ವರಲ್ಲಿ ಜಿದ್ದಾ ಜಿದ್ದು ನಡೆದು ಕೊನೆಗೆ  ತ್ರಿಪರ್ಣ ಚಕ್ರವರ್ತಿ ಬಹುಮಾನ  ಗೆದ್ದಿದ್ದಾರೆ.

- Advertisement -

ಬಹುಮಾನದ ಹಣದಲ್ಲಿ ತನಗೆ ಅಗತ್ಯವಿರುವ ವಸ್ತುಗಳನ್ನು ಖರೀದಿಸಬೇಕೆಂಬ ಆಲೋಚನೆ ಇದೆ ಎಂದು ವಿಜೇತೆ ತ್ರಿಪರ್ಣ ಹೇಳಿಕೊಂಡಿದ್ದಾಳೆ. ಅಮೆರಿಕ ಮೂಲದ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಈಕೆ ಸದ್ಯ ವರ್ಕ್ ಫ್ರಂ ಹೋಮ್ ನಲ್ಲಿದ್ದಾಳೆ. ಈ ಕಾರಣದಿಂದಾಗಿ, ಅವಳು ರಾತ್ರಿಯೂ ಎಚ್ಚರವಾಗಿರಬೇರಬೇಕಾದ ಅನಿವಾರ್ಯತೆ ಇತ್ತು. ಅಂತೂ ಈ ಸ್ಪರ್ಧೆಯ ಮೂಲಕ ಎಲ್ಲ ನಿದ್ದೆಯನ್ನು ವಾಪಸು ಪಡೆದುಕೊಂಡಿದ್ದಾಳೆ ಎನ್ನಬಹುದು.



Join Whatsapp