ಉಡುಪಿ: ರಸ್ತೆ ದಾಟುವ ವೇಳೆ ಬಸ್‌ ಡಿಕ್ಕಿ; ಮಹಿಳೆ ಮೃತ್ಯು

Prasthutha|

ಉಡುಪಿ:ರಸ್ತೆ ದಾಟುವ ವೇಳೆ ಬಸ್‌ ಡಿಕ್ಕಿ ಹೊಡೆದು ಮಹಿಳೆ ಮೃತಪಟ್ಟ ಘಟನೆ ಅಂಬಾಗಿಲು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.

- Advertisement -


ಮೃತ ಮಹಿಳೆಯನ್ನು ಹೆಬ್ರಿ ನಿವಾಸಿ ವಸಂತಿ ಶೆಟ್ಟಿ (65) ಎಂದು ಗುರುತಿಸಲಾಗಿದೆ. ವಸಂತಿ ಅವರು ಹೆದ್ದಾರಿ ದಾಟುತ್ತಿದ್ದ ವೇಳೆ ಕುಂದಾಪುರ ಕಡೆಯಿಂದ ಉಡುಪಿಗೆ ವೇಗವಾಗಿ ಬರುತ್ತಿದ್ದ ಬಸ್‌ ಡಿಕ್ಕಿ ಹೊಡೆದಿದೆ.


ಘಟನೆಯಲ್ಲಿ ವಸಂತಿ ಅವರ ತಲೆ,ಕೈ ಮತ್ತು ಕಾಲಿಗೆ ಗಂಭೀರ ಗಾಯಗಳಾಗಿದ್ದು,ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿತ್ತು. ಈ ಕುರಿತು ಉಡುಪಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp