ವೃತ್ತಿ ಬದುಕಿನಲ್ಲಿ ಒಂದು ದಿನವೂ ಗೈರಾಗದ ನಿವೃತ್ತ ಪ್ರೊಫೆಸರ್ ಗೆ ಲೆಕ್ಸ್ ಜ್ಯೂರಿಸ್ ಲಾ ಚೇಂಬರ್ ವತಿಯಿಂದ ಸನ್ಮಾನ

Prasthutha|

ಮಂಗಳೂರು: ವೃತ್ತಿ ಬದುಕಿನ ಒಂದು ದಿನವೂ ಶಾಲೆಗೆ ಗೈರಾಗದೆ, ನಿವೃತ್ತಿ ಪಡೆದ ಮೇಲೂ ಶಾಲೆಗೆ ಆಗಮಿಸಿ ವಿದ್ಯಾರ್ಥಿಗಳಿಗೆ ಭೋದನೆ ಮಾಡುವ ನಿವೃತ್ತ ಶಿಕ್ಷಕ ಪ್ರೊಫೆಸರ್ ಉದಯ್ ಕುಮಾರ್ ಅವರನ್ನು ಮಂಗಳೂರಿನ ಲೆಕ್ಸ್ ಜ್ಯೂರಿಸ್ ಲಾ ಚೇಂಬರ್ ಸದಸ್ಯರು ಶಿಕ್ಷಕರ ದಿನದಂದು ಸನ್ಮಾನಿಸಿದ್ದಾರೆ.

- Advertisement -

ಮಂಗಳೂರಿನ ಪ್ರತಿಷ್ಠಿತ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನಲ್ಲಿ (SDMLC) ಪ್ರಾಧ್ಯಾಪಕರಾದ ಉದಯ್ ಕುಮಾರ್ , 34 ವರ್ಷ ಗಳ ತನ್ನ ವೃತ್ತಿ ಬದುಕಿನಲ್ಲಿ ಒಂದು ದಿನವೂ ಕೆಲಸಕ್ಕೆ ರಜೆ ಮಾಡಿದವರಲ್ಲ .ಪಿ ಎಲ್, ಸಿ ಎಲ್ ತೆಗೆದುಕೊಳ್ಳದ, ಒಂದೇ ಒಂದು ತರಗತಿ ಮಿಸ್ ಮಾಡದ ಈ ಆದರ್ಶ ಶಿಕ್ಷಕ ತನ್ನ ತಂದೆ ತೀರಿಕೊಂಡಾಗಲೂ ಅಂತಿಮ ಸಂಸ್ಕಾರ ಮುಗಿಸಿ ಕಾಲೇಜಿಗೆ ಹಾಜರಾಗಿದ್ದರು.

ದೇಶದ ಎಲ್ಲೆಡೆ ಅಪಾರ ಪ್ರಮಾಣದ ಶಿಷ್ಯ ಸಮೂಹವನ್ನು ಹೊಂದಿರುವ ಪ್ರೊ. ಉದಯ್ ಕುಮಾರ್ ಇವರ ಶಿಷ್ಯರು ಇದೀಗ ಸುಪ್ರೀಂಕೋರ್ಟ್, ಹೈಕೋರ್ಟ್ ಗಳಲ್ಲಿ ಖ್ಯಾತ ನ್ಯಾಯವಾದಿ ಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು ಶಾಸಕರು, ಸಂಸದರು ಸಚಿವರು ಜನಪ್ರತಿನಿಧಿಗಳಾಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ.

- Advertisement -

ತನ್ನ ಜೀವನವನ್ನೇ ವಿದ್ಯಾರ್ಥಿಗಳಿಗೋಸ್ಕರ ಮುಡಿಪಾಗಿಟ್ಟಿರುವ ಪ್ರೊಫೆಸರ್ ಉದಯ ಕುಮಾರ್ ರವರನ್ನು ಶಿಕ್ಷಕರ ದಿನಾಚರಣೆಯ ಅಂಗವಾಗಿ ಲೆಕ್ಸ್ ಜ್ಯೂರಿಸ್ ಲಾ ಚೇಂಬರ್ ವತಿಯಿಂದ ಸನ್ಮಾನಿಸಲಾಗಿದ್ದು, ಈ ಸಂದರ್ಭದಲ್ಲಿ ವಕೀಲರಾದ ಒಮರ್ ಫಾರೂಕ್ ಮುಲ್ಕಿ, ಆಸಿಫ್ ಬೈಕಾಡಿ, ಅಬು ಹಾರಿಶ್ ಪಜೀರು, ಉಮರ್ ಫಾರೂಕ್ ಕಾವೂರು, ಮಹಮ್ಮದ್ ಅಸ್ಗರ್ ಮುಡಿಪು ಮತ್ತು ಇಝಾಜ್ ಅಹಮ್ಮದ್ ಉಳ್ಳಾಲ ಮುಂತಾದವರು ಉಪಸ್ಥಿತರಿದ್ದರು.



Join Whatsapp