ಬಾಂಗ್ಲಾದೇಶ ನಮ್ಮ ಅತಿ ದೊಡ್ಡ ವ್ಯಾಪಾರ ಪಾಲುದಾರ: ಪ್ರಧಾನಿ ಮೋದಿ

Prasthutha|

ನವದೆಹಲಿ: ಪ್ರಧಾನಿ ಮೋದಿಯವರು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರನ್ನು ಮಂಗಳವಾರ ರಾಷ್ಟ್ರಪತಿ ಭವನದಲ್ಲಿ ಸ್ವಾಗತಿಸಿದರು.

- Advertisement -

“ಸ್ನೇಹದಿಂದ ಯಾವುದೇ ಸಮಸ್ಯೆಯನ್ನಾದರೂ ಪರಿಹರಿಸಬಹುದು. ಹಾಗಾಗಿ ನಾವು ಯಾವಾಗಲೂ ಅದನ್ನು ಮಾಡುತ್ತೇವೆ” ಎಂದು ಪ್ರಧಾನಿ ಮೋದಿ ಹೇಳಿದರು.

ಇಬ್ಬರು ಪ್ರಧಾನಿಗಳೂ ವ್ಯಾಪಾರ ಸಂಬಂಧ, ಸಂಪರ್ಕ ಸಂವಹನ, ದಿನ ರಕ್ಷಣಾ ವ್ಯವಸ್ಥೆಯ ಬಗೆಗೆ ಚರ್ಚಿಸಿದರು. ಕುಶಿಯಾರಾ ನದಿಯ ನೀರು ಹಂಚಿಕೆ, ರೈಲ್ವೆ ಬಗ್ಗೆ ತರಬೇತಿ ಹಾಗೂ ಐಟಿ ಸಹಕಾರ, ವಿಜ್ಞಾನ, ಬಾಹ್ಯಾಕಾಶ, ಮಾಧ್ಯಮ ಸಹಕಾರದ ಬಗೆಗೆ ಭಾರತ ಮತ್ತು ಬಾಂಗ್ಲಾದೇಶಗಳು ಪರಸ್ಪರ ಅರಿವಿನ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಇದೆ.

- Advertisement -

ಭಾರತಕ್ಕೆ ಬಂದ ಒಂದೇ ಗಂಟೆಯಲ್ಲಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಭೇಟಿಯಾದರು. ಎರಡೂ ದೇಶಗಳ ಕೊಡುಕೊಳ್ಳುವಿಕೆಯ ಬಗ್ಗೆ ಪರಸ್ಪರ ಚರ್ಚೆ ನಡೆಸಿದರು.

ಈ ಬಗ್ಗೆ ಜೈಶಂಕರ್ ಚರ್ಚೆ ಉತ್ತಮವಾಗಿತ್ತು. ಪ್ರಧಾನಿಯವರೊಡನೆ ಚರ್ಚಿಸಿ ಅಂತಿಮ ರೂಪ ನೀಡಲಾಗುವುದು ಎಂದರು.ಪ್ರಧಾನಿ ಶೇಖ್ ಹಸೀನಾ ಅವರು ಗುರುವಾರ ಅಜ್ಮೀರ್ ಗೆ ಪ್ರಯಾಣಿಸಿ ಖ್ವಾಜಾ ಮೊಯಿದೀನ್ ಚಿಸ್ತಿ ದರ್ಗಾಕ್ಕೆ ಭೇಟಿ ನೀಡಲಿದ್ದಾರೆ.

ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಉಪರಾಷ್ಟ್ರಪತಿ ಜಗದೀಪ್ ದನ್ಕರ್ ಅವರನ್ನು ಔಪಚಾರಿಕವಾಗಿ ಹಸೀನಾ ಅವರು ಭೇಟಿಯಾದರು.




Join Whatsapp