ಎಸಿಬಿ ರದ್ದತಿಗೆ ನ್ಯಾಯಾಲಯ ಆದೇಶ: ಲೋಕಾಯುಕ್ತಕ್ಕೆ ಎಲ್ಲ ಪ್ರಕರಣ ವರ್ಗಾಯಿಸುವಂತೆ ಆಲಂ ಪಾಷಾ ಆಗ್ರಹ

Prasthutha|

ಬೆಂಗಳೂರ: ಎಸಿಬಿ ಭ್ರಷ್ಟಾಚಾರ ನಿಗ್ರಹ ದಳ ಹಾಗೂ ಲೋಕಾಯುಕ್ತ ಸಂಸ್ಥೆ ಇದ್ದರೂ ಇಲ್ಲದಂತಾಗಿದ್ದು, ನ್ಯಾಯಾಲಯದ ಆದೇಶದಿಂದಾಗಿ ಎಸಿಬಿಯಲ್ಲಿರುವ 355 ಅಧಿಕಾರಿಗಳು ಸುಮ್ಮನೆ ಕುಳಿತಿದ್ದು, ಎಸಿಬಿಗೆ ಗ್ರಹಣಹಿಡಿದಂತಾಗಿದೆ. ಇಲ್ಲಿರುವ ಎಲ್ಲ ಅಧಿಕಾರಿಗಳನ್ನು ಲೋಕಾಯುಕ್ತಕ್ಕೆ ವರ್ಗಾಯಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ಆಲಂ ಪಾಷಾ ಆಗ್ರಹಿಸಿದ್ದಾರೆ.

- Advertisement -

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಾಯುಕ್ತ ನ್ಯಾಯಾಂಗ ಸ್ಥಾನಮಾನ ಹೊಂದಿರುವ ಸಂಸ್ಥೆಯಾಗಿದೆ. 168 ಮಂದಿ ಭ್ರಷ್ಟರ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಿಸಲಾಗಿದೆ. ಸರ್ಕಾರದಿಂದ ಸುಮಾರು 460 ಆರೋಪಿಗಳಿಗೆ ರಕ್ಷಣೆ ದೊರೆತಂತಾಗಿದೆ ಎಂದು ತಿಳಿಸಿದರು.

 ಬೆಲೆ ಬಾಳುವ ನೂರಾರು ಎಕರೆ ಜಮೀನನ್ನು ಆಕ್ರಮವಾಗಿ ನಗದು ವ್ಯವಹಾರದ ಮೂಲಕ ಮಾರಾಟ ಮಾಡಲಾಗುತ್ತದೆ. ಎಸಿಬಿ, ಲೋಕಾಯುಕ್ತ ಇದ್ದರೂ ಇಲ್ಲದಂತಾಗಿದೆ. ಈ ಬಗ್ಗೆ ವಿಪಕ್ಷಗಳು ಮೌನವಹಿಸಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದರು.

- Advertisement -

ಎಸಿಬಿ ರದ್ದು ಮಾಡಿ ನ್ಯಾಯಾಲಯ ಆದೇಶ ನೀಡಿದ್ದರೂ ಇದರ ಪಾಲನೆಗೆ ಎಷ್ಟು ಸಮಯ ಬೇಕು ಎಂದು ಪ್ರಶ್ನಿಸಿದ ಅವರು, ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಎಸಿಬಿ ರದ್ದು ಪಡಿಸುವುದಾಗಿ ಭರವಸೆ ನೀಡಿತ್ತು. ನ್ಯಾಯಾಲಯ ಆದೇಶ ನೀಡಿದ್ದರೂ  ಮೀನಾಮೇಷ ಎಣಿಸುತ್ತಿರುವುದು ಆಡಳಿತ ಪಕ್ಷಕ್ಕೆ ಯಾವುದೇ ಬದ್ಧತೆ ಇಲ್ಲ ಎಂಬುದು ತಿಳಿಯಲಿದೆ ಎಂದು ಹೇಳಿದರು.

ವಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮನ್ನು ರಕ್ಷಿಸಿಕೊಳ್ಳಲು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಎಸಿಬಿಯನ್ನು ಹುಟ್ಟು ಹಾಕಿದರು. ಲೋಕಾಯುಕ್ತಕ್ಕೆ ಶಾಶ್ವತವಾಗಿ ಬೀಗ ಹಾಕುವ ಕೆಲಸ ಮಾಡಿದರು. ಆದರೆ ಅವರ ತೀರ್ಮಾನಕ್ಕೆ ನ್ಯಾಯಾಲಯ ಈಗ ತಡೆ ನೀಡಿದ್ದು ಪ್ರಸ್ತುತ ಮುಂಬರುವ ಅಧಿವೇಶನದಲ್ಲಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.



Join Whatsapp