ಲೈಂಗಿಕ ದೌರ್ಜನ್ಯವೆಸಗಿ ರೈಲಿನಿಂದ ಎಸೆದ ದುಷ್ಕರ್ಮಿ: ಮಹಿಳೆ ಮೃತ್ಯು, ಬೋಗಿಯಲ್ಲಿ ಮಗು ಒಂಟಿಯಾಗಿ ಪತ್ತೆ

Prasthutha|

ಚಂಡೀಗಢ: ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ವ್ಯಕ್ತಿಯ ವಿರುದ್ಧ ತಿರುಗಿಬಿದ್ದ ಮಹಿಳೆಯನ್ನು ಓಡುವ ರೈಲಿನಿಂದ ತಳ್ಳಿ ಹಾಕಿ ಕೊಲೆ ಮಾಡಿದ ಘಟನೆ ಹರ್ಯಾಣದ ಫತೇಬಾದ್ ಜಿಲ್ಲೆಯಲ್ಲಿ ನಡೆದಿದೆ. ಆಕೆ ತನ್ನ ಒಂಬತ್ತು ವರ್ಷದ ಮಗುವಿನೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ಫತೇಬಾದ್’ನ ತೋಹಾನಾ ಪಟ್ಟಣದ ನಿಲ್ದಾಣಕ್ಕೆ ರೈಲು ತಲುಪಿದಾಗ ಮೃತ ಮಹಿಳೆಯ ಪತಿ ತನ್ನ ಮಗು ಒಂಟಿಯಾಗಿ ಅಳುತ್ತಿರುವುದನ್ನು ಕಂಡಿದ್ದಾನೆ. ನಂತರ ಮಗು ನಡೆದ ಘಟನೆಯನ್ನು ತನ್ನ ತಂದೆಗೆ ತಿಳಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವೇಳೆ ಮೂವರು ಪ್ರಯಾಣಿಕರನ್ನು ಹೊರತುಪಡಿಸಿ ಇಡೀ ಬೋಗಿ ಖಾಲಿಯಾಗಿತ್ತು ಎಂದು ಫತೇಬಾದ್ ಪೊಲೀಸ್ ಮುಖ್ಯಸ್ಥೆ ಆಸ್ತಾ ಮೋದಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

- Advertisement -

ಮಹಿಳೆ ಒಂಟಿಯಾಗಿ ಪ್ರಯಾಣಿಸುತ್ತಿರುವುದನ್ನು ಗಮನಿಸಿದ ದುಷ್ಕರ್ಮಿ, ಆಕೆಗೆ ಕಿರುಕುಳ ನೀಡಲು ಯತ್ನಿಸಿದ್ದಾನೆ. ಇದನ್ನು ವಿರೋಧಿಸಿದ ಆಕೆ ಆತನೊಂದಿಗೆ ಜಗಳವಾಡಿದ್ದಾಳೆ. ಈ ವೇಳೆ ದುಷ್ಕರ್ಮಿ ಆಕೆಯನ್ನು ರೈಲಿನಿಂದ ಹೊರಕ್ಕೆ ತಳ್ಳಿ ಹಾಕಿದ ಬಳಿಕ ತಾನೂ ಕೆಳಗೆ ಹಾರಿದ್ದಾನೆ. ಈ ಮಾಹಿತಿಯನ್ನು ಮಗು ಪೊಲೀಸರಿಗೆ ತಿಳಿಸಿದೆ.

ಲೈಂಗಿಕ ದೌರ್ಜನ್ಯವೆಸಗಿದ ದುಷ್ಕರ್ಮಿಯನ್ನು ಸಂದೀಪ್ ಎಂದು ಗುರುತಿಸಲಾಗಿದ್ದು, ರೈಲಿನಿಂದ ಜಿಗಿದ ಕಾರಣ ಆತ ಗಾಯಗೊಂಡು ಚಿಕಿತ್ಸೆಗೆ ಆಸ್ಪತ್ರೆ ದಾಖಲಿಸಲಾಗಿದೆ. ಶೀಘ್ರವೇ ಆತನನ್ನು ಬಂಧಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾತ್ರಿ ವೇಳೆ ರೈಲ್ವೇ ಪೊಲೀಸರು ಬೋಗಿಗಳ ಮೇಲೆ ನಿಗಾ ಇಡಬೇಕಾಗಿರುವುದರಿಂದ ಭದ್ರತಾ ಲೋಪ ಉಂಟಾಗಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತೋಹಾನಾದ ರೈಲ್ವೇ ಪೊಲೀಸ್ ಸಬ್ ಇನ್ಸ್’ಪೆಕ್ಟರ್ ಜಗದೀಶ್ ಸುದ್ದಿಗಾರರಿಗೆ ತಿಳಿಸಿದ್ದಾರೆ.



Join Whatsapp