ಬಿಜೆಪಿಯ ಗೆಲುವಿಗಾಗಿ ಆರೆಸ್ಸೆಸ್ ದೇಶದೆಲ್ಲೆಡೆ ಬಾಂಬ್ ಸ್ಫೋಟ ನಡೆಸಿದೆ- ಕೋರ್ಟಿನಲ್ಲಿ ತಪ್ಪೊಪ್ಪಿಕೊಂಡ ಆರೆಸ್ಸೆಸ್ ಸದಸ್ಯ

Prasthutha|

ನವದೆಹಲಿ: ಭಾರತದ ನಾನಾ ಕಡೆ ನಡೆದ ಬಾಂಬು ಸ್ಫೋಟಕ್ಕೆ ಆರೆಸ್ಸೆಸ್ ಕಾರಣವಾಗಿದೆ. ಅಂಥ ಆರೆಸ್ಸೆಸ್ ತರಬೇತಿ ಶಿಬಿರಗಳಲ್ಲಿ ನಾನು ನೇರವಾಗಿ ಭಾಗವಹಿಸಿದ್ದೆ ಎಂದು ನಾಂದೇಡ್ ಕೋರ್ಟಿಗೆ ಆರೆಸ್ಸೆಸ್ ಮುಖಂಡನೋರ್ವ ಬಹಿರಂಗಪಡಿಸಿದ್ದನ್ನು  “ಮುಸ್ಲಿಂ ಮಿರರ್” ವರದಿ ಮಾಡಿದೆ.

- Advertisement -

ತಾನು ಆರೆಸ್ಸೆಸ್ ಕಾರ್ಯಕಾರಿ ಸದಸ್ಯ ಎಂದು ಹೇಳಿರುವ ಯಶವಂತ್ ಶಿಂಧೆ, ಆರೆಸ್ಸೆಸ್ ದೇಶದ ಎಲ್ಲ ಕಡೆ ಬಾಂಬ್ ಸ್ಪೋಟಕ್ಕೆ ಕಾರಣವಾಗಿದ್ದು, ಅದರ ಬಾಂಬು ತರಬೇತಿ ಶಿಬಿರಗಳಲ್ಲಿ ನಾನು ಭಾಗವಹಿಸಿದ್ದೆ ಎಂದು ನಾಂದೇಡ್ ಕೋರ್ಟಿಗೆ ಸಲ್ಲಿಸಿದ ಅಫಿದವಿಟ್ ನಲ್ಲಿ ಹೇಳಿದ್ದಾರೆ.

ಬಾಂಬು ಸ್ಫೋಟದ ಕಾರ್ಯಾಚರಣೆ ನಡೆಸಿದ ಮತ್ತು ನಾನಾ ಹಂತಗಳಲ್ಲಿ ವ್ಯವಹರಿಸಿದ ಹಲವು ಆರೆಸ್ಸೆಸ್ ಮತ್ತು ವಿಶ್ವ ಹಿಂದೂ ಪರಿಷತ್ ಸದಸ್ಯರ ಹೆಸರುಗಳನ್ನು ಯಶವಂತ್ ಶಿಂಧೆ ಅಫಿದವಿಟ್ ನಲ್ಲಿ ಪ್ರಸ್ತಾಪಿಸಿದ್ದಾರೆ. ಸಂಚು, ಯೋಜನೆ,   ಆಯ್ಕೆ, ಸ್ಫೋಟ ಇವೆಲ್ಲ ನಡೆಯುವುದರ ವಿವರವನ್ನೂ ಅದರಲ್ಲಿ ನೀಡಿದ್ದಾರೆ.

- Advertisement -

ನಾನು ಹಿಂದುತ್ವದಲ್ಲಿ ನಂಬಿಕೆಯವನಾಗಿದ್ದು, ಹಿಂದೂ ಧರ್ಮವೇ ಗಣ್ಯ ಎನ್ನುವವನಾಗಿದ್ದೇನೆ. ಆದರೆ ಈ ಉಗ್ರ ಕೃತ್ಯ ಖಂಡಿಸುತ್ತೇನೆ ಎಂದು ಅದರ ಹಿಂದಿನ ತಲೆಗಳಾದ ಮೂವರು ಆರೆಸ್ಸೆಸ್ ಹಾಗೂ ವಿಹಿಂಪ ನಾಯಕರ ಹೆಸರನ್ನು ಸಹ ಅಫಿದವಿಟ್ ನಲ್ಲಿ ಸೇರಿಸಿದ್ದಾರೆ. 

ಅಫಿದವಿಟ್ ನಲ್ಲಿ ಇಂದ್ರೇಶ್ ಕುಮಾರ್, ಹಿಮಾಂಶು ಪಾನಸೆ, ಮಿಲಿಂದ್ ಪರಾಂದೆ, ರಾಕೇಶ್ ದಾವಡೆ, ರವಿ ದೇವ್ (ಮಿಥುನ್ ಚಕ್ರವರ್ತಿ) ಇವರೆಲ್ಲ ಪ್ರಮುಖ ಸಂಚುಗಾರರು ಎಂದು ಹೇಳಲಾಗಿದೆ. ಮುಖ್ಯವಾಗಿ ಮೂವರು, ಮಿಲಿಂದ್ ಪರಾಂದೆ ಮತ್ತು ರಾಕೇಶ್ ದಾವಾದ್ ತರಬೇತಿ ಶಿಬಿರಗಳಲ್ಲಿ ತರಬೇತಿ ನೀಡಿದರೆ, ರವಿ ದೇವ್ ಬಾಂಬು ತಯಾರಿಸುವುದನ್ನು ಹೇಳಿ ಕೊಡುತ್ತಿದ್ದ ಎಂದು ಅವರು ಹೇಳಿದ್ದಾರೆ.

ನಾನು ತರಬೇತಿಗೆ ಹೋಗಿದ್ದರೂ ಇಂಥ ಹೀನ ಕುಕೃತ್ಯದಲ್ಲಿ ಭಾಗವಹಿಸಲು ಮನಸ್ಸು ಬಾರದೆ ಸ್ಫೋಟಿಸುವುದಕ್ಕೆ ಹೋಗಿಲ್ಲ. ಅಲ್ಲದೆ ಬಾಂಬು ಹಾಕುವುದೆಲ್ಲ ಒಳ್ಳೆಯದಲ್ಲ, ಅದು ಪಾಪ ಕೃತ್ಯ ಎಂದು ನನ್ನ ಜೊತೆಗೆ ಹೆಚ್ಚಿನ ಸಂಪರ್ಕದಲ್ಲಿದ್ದವರಿಗೆ ತಿಳಿ ಹೇಳಿದ್ದೆ. ಆ ಮೂಲಕ ಸಾಕಷ್ಟು ಮುಗ್ಧ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ನರ ಜೀವವನ್ನು ರಕ್ಷಿಸಿದ್ದೇನೆ ಎಂದು ಶಿಂಧೆ ಅಫಿದವಿಟ್ ನಲ್ಲಿ ತಿಳಿಸಿದ್ದಾರೆ.

ಆದರೆ ಆರೆಸ್ಸೆಸ್, ಬಿಜೆಪಿಯ ಬಾಂಬು ಸ್ಫೋಟವು ಎಣಿಸಿದಷ್ಟು ಯಶಸ್ಸು ಕಾಣಲಿಲ್ಲ. ಅಲ್ಲದೆ ಬಿಜೆಪಿಗೆ ಭಾರೀ ಲಾಭವನ್ನೇನೂ ತಂದುಕೊಡಲಿಲ್ಲ. ಭಾರೀ ಬಾಂಬು ನಡೆಸಿದ ಸಂದರ್ಭದಲ್ಲಿ 2004ರಲ್ಲಿ ಕಾಂಗ್ರೆಸ್ ಪಕ್ಷವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂತು. ಪ್ರಮುಖ ಸ್ಫೋಟ ಸಂಚುಗಾರರಾದ ಮಿಲಿಂದ್ ಪರಾಂದೆಯಂಥವರು ಇದರಿಂದ ಬೆದರಿ ಭೂಗತರಾದರು. ಆದರೆ ಅಲ್ಲಿಂದಲೂ ಗುಪ್ತವಾಗಿ ಸಂಚು ಮುಂದುವರಿಸಿದ್ದಾರೆ.

ಅವರು ಭೂಗತರಾಗಿದ್ದುಕೊಂಡು ದೇಶದ ನಾನಾ ಕಡೆ ಬಾಂಬು ಸ್ಫೋಟ ನಡೆಸಿದ್ದು, ಪೊಲೀಸರ ವೇಷದಲ್ಲೂ ತಿರುಗಾಡುತ್ತಾರೆ. ಅದೇ ವೇಳೆ ಬಾಂಬು ಸ್ಫೋಟಿಸಿದ್ದು ಮುಸ್ಲಿಮರು ಎಂದು ಮಾಧ್ಯಮಗಳಲ್ಲಿ ವರದಿ ಬರುವಂತೆ ಮಾಡುತ್ತಾರೆ. ಅದು 2014ರ ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲವಾಯಿತು ಎಂದು ಅಫಿದವಿಟ್ ನಲ್ಲಿ ವಿವರಿಸಲಾಗಿದೆ.

2014ರಲ್ಲಿ ಬಿಜೆಪಿಯು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಮೋದಿಯವರು ಪ್ರಧಾನಿಯಾದರು. ಇದಾಗುತ್ತಲೇ ಭೂಗತ ಆರೆಸ್ಸೆಸ್ ಮತ್ತು ವಿಶ್ವ ಹಿಂದೂ ಪರಿಷತ್ ವಿಧ್ವಂಸಕರೆಲ್ಲ ಮುನ್ನೆಲೆಗೆ ಬಂದರು.

2006ರ ನಾಂದೇಡ್ ಸ್ಫೋಟದಲ್ಲಿ ಮೇಲೆ ಹೇಳಿದ ಮೂವರು ಪ್ರಮುಖ ಸಂಚುಗಾರರಾಗಿದ್ದು, ಅವರನ್ನು ಕಾನೂನು ಕಟಕಟೆಗೆ ಎಳೆಯಬೇಕು ಎಂದು ಯಶವಂತ್ ಶಿಂಧೆ  ನಾಂದೇಡ್ ಕೋರ್ಟಿಗೆ ಸಲ್ಲಿಸಿದ ಅಫಿದವಿಟ್ ನಲ್ಲಿ ಅಫಿದವಿಟ್ ನಲ್ಲಿ ಹೇಳಲಾಗಿದೆ.




Join Whatsapp