ದಾವೂದ್ ಇಬ್ರಾಹೀಂ ಕುರಿತು ಮಾಹಿತಿ ನೀಡಿದರೆ 25 ಲಕ್ಷ ರೂ.ಬಹುಮಾನ: ಎನ್ ಐಎ ಘೋಷಣೆ

Prasthutha|

ಮುಂಬೈ: ಮುಂಬೈ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ, ಭಾರತದಿಂದ ತಲೆಮರೆಸಿಕೊಂಡಿರುವ ದಾವೂದ್ ಇಬ್ರಾಹೀಂ ಬಂಧನಕ್ಕೆ ಪ್ರಯತ್ನ ಮುಂದುವರಿಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ-ಎನ್ ಐಎ, ಆತನ ಬಂಧನಕ್ಕೆ ಸಹಕಾರಿಯಾಗುವ ಯಾವುದೇ ಮಾಹಿತಿ ನೀಡಿದರೆ 25 ಲಕ್ಷ ರೂ. ಬಹುಮಾನ ನೀಡುವುದಾಗಿ ಗುರುವಾರ ಘೋಷಿಸಿದೆ.

- Advertisement -


ದಾವೂದ್ ಇಬ್ರಾಹೀಂ ಆಪ್ತ ಶಕೀಲ್ ಶೇಖ್ ಅಲಿಯಾಸ್ ಛೋಟಾ ಶಕೀಲ್ ನ ಬಗ್ಗೆ ಮಾಹಿತಿ ನೀಡಿದರೆ 20 ಲಕ್ಷ ರೂ., ಸಹಚರರಾದ ಹಾಜಿ ಅನೀಸ್ ಅಲಿಯಾಸ್ ಅನೀಸ್ ಇಬ್ರಾಹಿಂ ಶೇಖ್, ಜಾವೇದ್ ಪಟೇಲ್ ಅಲಿಯಾಸ್ ಜಾವೇದ್ ಚಿಕ್ನಾ ಮತ್ತು ಇಬ್ರಾಹಿಂ ಮುಷ್ತಾಕ್ ಅಬ್ದುಲ್ ರಝಾಕ್ ಮೆಮನ್ ಅಲಿಯಾಸ್ ಟೈಗರ್ ಮೆಮನ್ ಕುರಿತು ಮಾಹಿತಿ ನೀಡಿದರೆ ತಲಾ 15 ಲಕ್ಷ ರೂ.ಬಹುಮಾನ ನೀಡುವುದಾಗಿ ಎನ್ ಐಎ ಪ್ರಕಟಿಸಿದೆ.


ಇವರೆಲ್ಲರೂ 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳು ಎಂದು ಎನ್ ಐಎ ತಿಳಿಸಿದೆ.




Join Whatsapp