ರಸ್ತೆ ಮಧ್ಯದ ಮ್ಯಾನ್ ಹೋಲ್ ನ ತ್ಯಾಜ್ಯ ತೆರವುಗೊಳಿಸಿದ ಟ್ರಾಫಿಕ್ ಪೊಲೀಸ್ ಸಿಬ್ಬಂದಿ! ಬಿಬಿಎಂಪಿ ವಿರುದ್ಧ ಹರಿಹಾಯ್ದ ನೆಟ್ಟಿಗರು

Prasthutha|

ಬೆಂಗಳೂರು: ಭಾರೀ ಮಳೆಯಿಂದ ಎಚ್ ಎಎಲ್ ವ್ಯಾಪ್ತಿಯ ರಸ್ತೆಯಲ್ಲಿ ನೀರು ಹರಿದು, ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗಿತ್ತು. ಎಚ್ ಎಎಲ್ ಸಮೀಪದ ಎಕೋ ವರ್ಲ್ಡ್ ಬಳಿ ರಸ್ತೆ ಮಧ್ಯದಲ್ಲಿರುವ ಮ್ಯಾನ್ ಹೋಲ್ ನಲ್ಲಿ ಬಟ್ಟೆ ಮತ್ತಿತರ, ಪ್ಲಾಸ್ಟಿಕ್, ಕಸ ಕಡ್ಡಿಗಳು ಸಿಕ್ಕಿಹಾಕಿಕೊಂಡು ನೀರು ಸರಾಗವಾಗಿ ಹರಿಯಲು ಸಾಧ್ಯವಾಗದ್ದನ್ನು ಗಮನಿಸಿದ ಸ್ಥಳೀಯ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಭೀಮಾಶಿ ಹಾಗೂ ಟ್ರಾಫಿಕ್ ಪೊಲೀಸ್ ಅಧಿಕಾರಿ ನಾಗಮಣಿ ಅವರು ಕೈಯಿಂದಲೇ ಅದನ್ನು ತೆರವುಗೊಳಿಸಿದ್ದಾರೆ. ಈ ಕುರಿತ ವೀಡಿಯೋವನ್ನು ಎಚ್ ಎಎಲ್ ಏರ್ ಪೋರ್ಟ್ ಟ್ರಾಫಿಕ್ ಬಿಟಿಪಿ ಪೇಜ್ ನಲ್ಲಿ ಹಂಚಿಕೊಳ್ಳಲಾಗಿದೆ.

- Advertisement -

ಪೊಲೀಸ್ ಸಿಬ್ಬಂದಿಯ ಈ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಬಿಬಿಎಂಪಿಯ ನಿರ್ಲಕ್ಷ್ಯದಿಂದಾಗಿ ಪೊಲೀಸ್ ಸಿಬ್ಬಂದಿ ಈ ಕೆಲಸ ಮಾಡುವಂತಾಯಿತು ಎಂದು ನೆಟ್ಟಿಗರು ಬಿಬಿಎಂಪಿ ವಿರುದ್ಧ ಹರಿಹಾಯ್ದಿದ್ದಾರೆ.

- Advertisement -

ಬಿಬಿಎಂಪಿ ಎಂಜಿನಿಯರ್ ಗಳಿಗಿಂತ ಸಂಚಾರ ಪೊಲೀಸರೇ ಹೆಚ್ಚು ಸಂವೇದನಾಶೀಲರಾಗಿದ್ದಾರೆ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

ಪ್ರಶಾಂತ್ ಪಾಟೀಲ್ ಎಂಬವರು ಟ್ವೀಟ್ ಮಾಡಿ, ಸಂಬಂಧ ಪಟ್ಟ ಇಲಾಖೆ ನಿಯತ್ತಾಗಿ ಮಾಡದ ಕೆಲಸಕ್ಕೆ ಇನ್ನೊಂದು ಇಲಾಖೆಯವರು ತಮ್ಮದಲ್ಲದ ಕೆಲಸ ಮಾಡಬೇಕು. ನಾಚಿಕೆಯಾಗಬೇಕು ಸರ್ಕಾರಗಳಿಗೆ ಎಂದು ಕಿಡಿಕಾರಿದ್ದಾರೆ.

Join Whatsapp