ಗುವಾಹಟಿ: ಧಾರ್ಮಿಕ ಶಿಕ್ಷಕರೊಬ್ಬರು ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಅಸ್ಸಾಮಿನ ಬಿಜೆಪಿ ಸರ್ಕಾರವು ಬಾರ್ಪೇಟಾದ ಹೌಲಿಯಲ್ಲಿರುವ ಮದರಸವನ್ನು ನೆಲಸಮಗೊಳಿಸಿದೆ.
ಬಾರ್ಪೇಟಾ ಢಾಕಾಲಿಯಾಪಾರಾದಲ್ಲಿರುವ ಶೈಖುಲ್ ಹಿಂದ್ ಮಹಮೂದುಲ್ ಹಸನ್ ಜಮೀಯುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಎಂಬ ಹೆಸರಿನ ಮದರಸವನ್ನು ಸ್ಥಳೀಯ ಜಿಲ್ಲಾಡಳಿತದ ಸಮ್ಮುಖದಲ್ಲಿ ನೆಲಸಮಗೊಳಿಸಲಾಗಿದೆ. ಇದು ಅಸ್ಸಾಂ ಸರ್ಕಾರ ನೆಲಸಮಗೊಳಿಸುತ್ತಿರುವ ಎರಡನೇ ಮದರಸವಾಗಿದೆ. ಇತ್ತೀಚೆಗೆ ಸ್ಥಳೀಯ ಜಿಲ್ಲಾಡಳಿತದ ಆದೇಶದ ಮೇರೆಗೆ ಮದರಸವನ್ನು ನೆಲಸಮಗೊಳಿಸಲಾಗಿತ್ತು.
ಮದರಸ ಎಂದರೆ ಭಯೋತ್ಪಾದಕರನ್ನು ಪೋಷಿಸುವ ಕೇಂದ್ರವೆಂದೇ ಬಿಂಬಿಸುವ ಅಸ್ಸಾಮಿನ ಬಿಜೆಪಿ ಸರ್ಕಾರವು ತನಿಖೆಯ ನೆಪದಲ್ಲಿ ಮದರಸಗಳ ಮೇಲೆ ಹುಸಿ ಆರೋಪ ಹೊರಿಸಿ ದಬ್ಬಾಳಿಕೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತವಾಗಿದೆ ಎನ್ನಲಾಗಿದೆ.
ಬಾಂಗ್ಲಾದೇಶ-ಜಿಹಾದಿ ಸಂಘಟನೆಯೊಂದಿಗೆ ಶಿಕ್ಷಕರೊಬ್ಬರು ನಂಟು ಹೊಂದಿದ್ದಾರೆಂದು ಆರೋಪಿಸಿ ಮುಸ್ಲಿಂ ಶಿಕ್ಷಣ ಸಂಸ್ಥೆಗಳಿಗೆ ಸುಳ್ಳು ಆರೋಪ ಹೊರಿಸಿ ಅವುಗಳನ್ನು ನೆಲಸಮಗೊಳಿಸಲು ಪ್ರಯತ್ನಿಸುತ್ತಿದೆ. ಎನ್ನಲಾಗುತ್ತಿದೆ.