ಕೊಡಗು: ಕೋಳಿ ತುಂಬಿದ ಲಾರಿ ಪಲ್ಟಿ, ಚಾಲಕ ಸಾವು

Prasthutha|

ಮಡಿಕೇರಿ: ಕೋಳಿ ಸಾಗಾಟ ಮಾಡುತ್ತಿದ್ದ ಲಾರಿಯೊಂದು ಮಗುಚಿಬಿದ್ದು ಚಾಲಕ ಸಾವನ್ನಪ್ಪಿರುವ ಘಟನೆ ಸುಂಟಿಕೊಪ್ಪದಲ್ಲಿ ನಡೆದಿದೆ.

- Advertisement -

ಮಂಗಳೂರು ಮೂಲದ  ನಾಗಭೂಷಣ್ ಮೃತ ಲಾರಿ ಚಾಲಕ ಎಂದು ತಿಳಿದು ಬಂದಿದೆ.

ಇಂದು ಮುಂಜಾನೆ ಸುಮಾರು 5 ಗಂಟೆ ಸಮಯದಲ್ಲಿ ಮೈಸೂರಿನಿಂದ ಮಂಗಳೂರು ಕಡೆಗೆ ಕೋಳಿ ಸಾಗಾಟ  ಮಾಡುತಿದ್ದ ಲಾರಿ  ಸುಂಟಿಕೊಪ್ಪ ಸಮೀಪ  ಮಾರುತಿನಗರ ತಿರುವಿನಲ್ಲಿ  ಚಾಲಕನ ನಿಯಂತ್ರಣ ತಪ್ಪಿ  ಮಗುಚಿಕೊಂಡಿದ್ದು, ಲಾರಿ ಚಾಲಕ ಸ್ಥಳದಲ್ಲಿ ಮೃತಪಟ್ಟಿದ್ದಾರೆ.



Join Whatsapp