ರಾಷ್ಟ್ರಕ್ಕಾಗಿ ಖಾದಿ, ಆದರೆ ರಾಷ್ಟ್ರಧ್ವಜಕ್ಕೆ ಚೈನೀಸ್ ಪಾಲಿಸ್ಟರ್ : ರಾಹುಲ್ ವಾಗ್ದಾಳಿ

Prasthutha|

ನವದೆಹಲಿ: ರಾಷ್ಟ್ರಕ್ಕಾಗಿ ಖಾದಿ, ಆದರೆ ರಾಷ್ಟ್ರಧ್ವಜಕ್ಕೆ ಚೈನೀಸ್ ಪಾಲಿಸ್ಟರ್. ಪ್ರಧಾನಿ ಮೋದಿ ಅವರ ಮಾತುಗಳಿಗೂ ಮತ್ತು ಅವರು ಮಾಡುವ ಕೆಲಸಗಳಿಗೂ ಒಂದಕ್ಕೊಂದು ಹೊಂದಾಣಿಕೆಯೇ ಆಗುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

- Advertisement -


ಶನಿವಾರ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಖಾದಿ ಮಹತ್ವವನ್ನು ನೆನಪಿಸಿಕೊಳ್ಳುವ ಸಲುವಾಗಿ ಸಾಬರಮತಿ ನದಿ ತೀರದಲ್ಲಿಂದು ಆಯೋಜಿಸಿದ್ದ `ಖಾದಿ ಉತ್ಸವ’ದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ಭಾರತದ ಕನಸಿಗೆ ಖಾದಿ ಪ್ರಮುಖ ಶಕ್ತಿಯಾಗಿದೆ ಎಂದು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದರು. ಈ ಹೇಳಿಕೆಗೆ ಟ್ವೀಟ್ ಮಾಡಿ ರಾಹುಲ್ ಗಾಂಧಿ ತಿರುಗೇಟು ನೀಡಿದ್ದು,‘ಖಾದಿ ಫಾರ್ ನೇಷನ್’ ಆದರೆ ಚೈನೀಸ್ ಪಾಲಿಸ್ಟರ್ ರಾಷ್ಟ್ರಧ್ವಜಕ್ಕೆ. ಪ್ರಧಾನಿಯವರು ಆಡುವ ಮಾತಿಗೂ ಮತ್ತು ಮಾಡುವ ಕೆಲಸಕ್ಕೂ ಒಂದಕ್ಕೊಂದು ಸಂಬಂಧವೇ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.



Join Whatsapp