ಲಕ್ನೋ: ದೇಶದ ಅತಿ ಎತ್ತರದ ಅವಳಿ ಕಟ್ಟಡವನ್ನು ಭಾನುವಾರ ಮಧ್ಯಾಹ್ನ ಸರಿಯಾಗಿ 2:30ಕ್ಕೆ ಕ್ಷಣ ಮಾತ್ರದಲ್ಲೇ ಧ್ವಂಸಗೊಳಿಸಲಾಗಿದೆ.
ಕಟ್ಟಡ ನಿಯಮ ಉಲ್ಲಂಘಿಸಿ ಅಕ್ರಮವಾಗಿ ಸೂಪರ್ ಟೆಕ್ ಸಂಸ್ಥೆ ನಿರ್ಮಿಸಿರುವ ಈ ಕಟ್ಟಡದ ಧ್ವಂಸಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಕಳೆದ 1 ವಾರದಿಂದಲೂ ಕಟ್ಟಡ ಧ್ವಂಸಕ್ಕೆ ತಯಾರಿ ಮಾಡಿಕೊಳ್ಳಲಾಗಿತ್ತು.
ಈ ಕಟ್ಟಡಕ್ಕೆ 1,200 ಕೋಟಿ ರೂ.ಗೂ ಅಧಿಕ ಹಣ ಖರ್ಚು ಮಾಡಿ 7.5 ಲಕ್ಷ ಚದರ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ. 20 ಕೋಟಿ ರೂ. ಖರ್ಚು ಮಾಡಿ ಅದೇ ಕಟ್ಟಡವನ್ನು ಇದೀಗ ಕೆಡವಲಾಗಿದೆ.