ಧ್ವಜಾರೋಹಣದ ಮೂಲಕ ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯ ಪ್ರತಿನಿಧಿ ಸಮಾವೇಶ ಕ್ಕೆ ಚಾಲನೆ: ಅಬ್ದುಲ್ ಮಜೀದ್ ರಿಂದ ಉದ್ಘಾಟನೆ

Prasthutha|

ಮೈಸೂರು: ರಾಜ್ಯದಲ್ಲಿ ಮಹಿಳಾ ಪರ ಚಳುವಳಿಯಲ್ಲಿ ಮುಂಚೂಣಿಯಲ್ಲಿರುವ ವಿಮನ್ ಇಂಡಿಯಾ ಮೂವ್ಮೆಂಟ್ ಕರ್ನಾಟಕ ಇದರ ರಾಜ್ಯ ಪ್ರತಿನಿಧಿಗಳ ಸಮಾವೇಶ ಮೈಸೂರಿನ ನಲಪಾಡ್ ರೆಸಿಡೆನ್ಸಿ ಆವರಣದಲ್ಲಿ ದ್ವಜಾರೋಹಣದ ಮೂಲಕ ಚಾಲನೆಗೊಂಡಿತು. ನಂತರ ಕಾನ್ಫರೆನ್ಸ್  ಸಭಾಂಗಣದಲ್ಲಿ ರಾಜ್ಯ ಪ್ರತಿನಿಧಿ ಸಮಾವೇಶ ಉದ್ಘಾಟನೆಗೊಂಡಿತು.

- Advertisement -

ರಾಜ್ಯಾಧ್ಯಕ್ಷೆ ಶಾಯಿದಾ ತಾಸ್ನೀಮ್ ಅವರ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಉದ್ಘಾಟನಾ ಭಾಷಣಗಾರರಾಗಿ ಭಾಗವಹಿಸಿ ಅಬ್ದುಲ್ ಮಜೀದ್ ಮೈಸೂರು ಅವರು ಮಾತನಾಡಿ ” ಮೋದಿ ಸರಕಾರದ ಬೇಟಿ ಬಚಾವೋ, ಬೇಟಿ ಪಡಾವೋ, ಕೇವಲ ಘೋಷಣೆಯಾಗಿ ಉಳಿದಿದೆ. ಬಿಲ್ಕೀಸ್ ಬಾನು ಅವರ ಮೇಲೆ ಅತ್ಯಾಚಾರ ಗೈದು, ಅವರ 14 ಮಂದಿ ಕುಟುಂಬಸ್ಥರನ್ನು ಕೊಲೆಗೈದ ಅಪರಾಧಿಗಳನ್ನು ಕಾನೂನ ನ್ನು ದುರುಪಯೋಗಿಸಿ ಬಿಡುಗಡೆ ಮಾಡಿರುವ ಗುಜರಾತ್ ಬಿಜೆಪಿ ಸರಕಾರದ ನಡೆ ತಲೆತಗ್ಗಿಸುವಂತಹದ್ದು. ಮುರುಘ ಮಠದಲ್ಲಿ ಮೂರ್ಛೆ ಹೋಗುವ ಮದ್ದು ನೀಡಿ ಹೆಣ್ಮಕ್ಕಳ ಮೇಲೆ ಅತ್ಯಾಚಾರ ನಡೆದಿದೆ. ಇದೀಗ ಒಡನಾಡಿ ಸಂಸ್ಥೆಯ ಮೂಲಕ ಕೇಸು ದಾಖಲಾಗಿದೆ. ಇಂತಹ ಮಠಧೀಶರು  ರಾಜಕೀಯವಾಗಿ ತುಂಬಾ ಪ್ರಭಾವಿಗಳಾಗಿದ್ದಾರೆ. ಹಾಗಾಗಿ ಈ ಪ್ರಕರಣವನ್ನು ಮುಚ್ಚಿಹಾಕುವ ಎಲ್ಲಾ ಪ್ರಯತ್ನಗಳು ನಡೆಯ ಬಹುದು. ಅದು ಎಲ್ಲಿಯ ವರೆಗೆ ಮುಂದುವರಿಯಬಹುದು ಎಂದರೆ ಪ್ರಕರಣ ದಾಖಲಿಸಿದವರನ್ನು ಕೊಲೆ ನಡೆಸಲು ಕೂಡ ಪ್ರಯತ್ನ ನಡೆಯ ಬಹುದು. ಹಾಗಾಗಿ ವಿಮೆನ್ ಇಂಡಿಯಾ ಮೂವ್ಮೆಂಟ್ ಅವರ ಬೆನ್ನೆಲುಬಾಗಿ ನಿಲ್ಲ ಬೇಕು. ಅದೇ ರೀತಿ ರಾಜಕೀಯ ರಂಗದಲ್ಲಿ ಮಹಿಳೆಯರನ್ನು ಸಕ್ರಿಯ ಗೊಳಿಸಲು ವಿಮೆನ್ ಇಂಡಿಯಾ ಮೂವ್ಮೆಂಟ್ ಯೋಜನೆ ರೂಪಿಸಬೇಕು. ಯಾವುದೇ ಹೋರಾಟದಲ್ಲೂ ನಾವಷ್ಟು ಶಕ್ತರಲ್ಲಾ ಎಂದುಕೊಂಡು ಹಿಂಜರಿಯ ಬಾರದು. ನಿಮ್ಮೊಂದಿಗೆ ಬೆನ್ನೆಲುಬಾಗಿ ಸದಾ SDPi ನಿಲ್ಲಲು ಸನ್ನದ್ಧವಾಗಿದೆ ” ಎಂದರು.

ನಂತರ ಅಧ್ಯಕ್ಷೀಯ ಭಾಷಣ ಮಾಡಿ ಮಾತನಾಡಿದ ಶಾಹಿದಾ ತಸ್ನೀಮ್ ” ಹಸಿವಿನ ಸೂಚ್ಯಾಂಕದಲ್ಲಿ ಭಾರತ ಪಾಕಿಸ್ತಾನ, ಬಾಂಗ್ಲಾದೇಶಕ್ಕಿಂತಲೂ ಹಿಂದುಳಿದಿದೆ. ಹಸಿವಿನ ಕಾರಣದಿಂದ ನೀರ ತೊಂದರೆ ಅನುಭವಿಸುವವರು ಮಹಿಳೆಯರಾಗಿದ್ದಾರೆ. ಬೆಲೆ ಏರಿಕೆಯ ಏಟು ಮಹಿಳೆಯರ ಅಡುಗೆ ಕೋಣೆಗೆ ಬೀಳುತ್ತಿದೆ. ಶಿಕ್ಷಣ, ಅಭಿವೃದ್ಧಿ, ಮಹಿಳಾ ಭದ್ರತೆಯಲ್ಲಿ ತೀರಾ ಹಿಂದುಳಿದಿರುವ ಉತ್ತರ ಪ್ರದೇಶವನ್ನು ಮುಖ್ಯಮಂತ್ರಿ ಬೊಮ್ಮಾಯಿ ಅವರು ಮಾದರಿಯಾಗಿಸುವುದು ವಿಪರ್ಯಾಸವೇ ಸರಿ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಪ್ರವೀಣ್ ನೆಟ್ಯಾರ್ ಮನೆಗೆ ಭೇಟಿ ಮಾಡಿ ಮುಖ್ಯಮಂತ್ರಿಗಳು ಅವರ ಮಡದಿ ಮತ್ತು ತಾಯಿಯಲ್ಲಿ ಮಾತನಾಡಿ ಪರಿಹಾರ ಘೋಷಣೆ ಮಾಡುತ್ತಾರೆ. ಆದರೆ ಅದೇ ಜಿಲ್ಲೆಯಲ್ಲಿ ಹತ್ಯೆಗೊಳಗಾದ ಮಸೂದ್ ಮತ್ತು ಫಾಝಿಲ್ ಮನೆಗೆ ಭೇಟಿ ಮಾಡದಿರುವ ಮುಖ್ಯಮಂತ್ರಿಯವರ ನಡೆ ಸರಿಯಲ್ಲ. ಮುರುಘ ಮಠದ ಸ್ವಾಮೀಜಿಯ ತನಿಖೆ ಮತ್ತು ನ್ಯಾಯಾಲಯದ ನಡೆ ಈ ಹಿಂದೆ ರಾಘವೇಂದ್ರ ಸ್ವಾಮೀಜಿ ಪ್ರಕರಣದ ರೀತಿಯಲ್ಲಿ ಆಗಬಾರದು ಎಂದರು.  ಕಾರ್ಯಕ್ರಮದಲ್ಲಿ ಆಯಿಷಾ ಬಜ್ಪೆ ಸ್ವಾಗತಿಸಿದರು, ಆಯೇಷಾ ಝಬಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಇಂದು ನಡೆಯುವ ರಾಜ್ಯ ಪ್ರತಿನಿಧಿ ಸಮಾವೇಶದಲ್ಲಿ ರಾಜ್ಯದ ವಿವಿಧ ಜಿಲ್ಲೆಯಿಂದ ಪ್ರತಿನಿಧಿಗಳು ಭಾಗವಸಿದ್ದಾರೆ.

- Advertisement -



Join Whatsapp