ವ್ಯವಹಾರದಲ್ಲಿ ನಷ್ಟ: ಪತ್ನಿ, ಮಕ್ಕಳಿಗೆ ವಿಷಹಾಕಿ ನೇಣಿಗೆ ಶರಣಾದ ಉದ್ಯಮಿ

Prasthutha|

ನಿಜಾಮಾಬಾದ್‌: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಲಂಗಾಣ ನಗರದ ಹೋಟೆಲ್‌ ವೊಂದರಲ್ಲಿ ನಡೆದಿದೆ.

- Advertisement -

ಆದಿಲಾಬಾದ್ ಮೂಲದ ಕೊತಕೋಟಾ ಸೂರ್ಯಪ್ರಕಾಶ್, ಅವರ ಪತ್ನಿ ಪ್ರತ್ಯೂಷಾ ಹಾಗೂ ಇಬ್ಬರು ಮಕ್ಕಳು ಮೃತಪಟ್ಟರು ಎಂದು ತಿಳಿದು ಬಂದಿದೆ.

ಸೂರ್ಯಪ್ರಕಾಶ್ ರಿಯಲ್​ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ವ್ಯವಹಾರದಲ್ಲಿ ನಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆತ್ಮಹತ್ಯೆ ಮಾಡಿಕೊಂಡ ಹೋಟೆಲ್​ ನ ರೂಮ್​ ನಲ್ಲಿ ಡೆತ್​ನೋಟ್​ ಸಿಕ್ಕಿರುವ ಬಗ್ಗೆ ಪೊಲೀಸರು ತಿಳಿಸಿದ್ದಾರೆ.



Join Whatsapp