ನವೀಕರಿಸಬಹುದಾದ ಇಂಧನ ಕರ್ನಾಟಕದ ಭವಿಷ್ಯ: ಅಧ್ಯಯನ

Prasthutha|

ಬೆಂಗಳೂರು: ಮುಂದಿನ ಐದು ದಶಕಗಳಲ್ಲಿ ಕರ್ನಾಟಕ ಸಹಿತ ಭಾರತದ ದಕ್ಷಿಣ ರಾಜ್ಯಗಳಲ್ಲಿ ಸೌರಶಕ್ತಿ ಮತ್ತು ಪವನ ಶಕ್ತಿ ಸಂವರ್ಧನೆಯ ಮೇಲೆ ಪರಿಣಾಮ ಬೀರಬಲ್ಲ ಹವಾಮಾನ ಬದಲಾವಣೆ ಮತ್ತಿತರ ಹಲವು ಅಂಶಗಳತ್ತ ಪುಣೆಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿಯರಾಲಜಿ (IITM) ಯ ಸಂಶೋಧನೆಯು ಬೆಳಕು ಚೆಲ್ಲಿದ್ದು, ಹಲವು ಪ್ರಶ್ನೆಗಳನ್ನೂ ಎತ್ತಿದೆ.

- Advertisement -

ಕರ್ನಾಟಕ ಸಚಿವ ಸಂಪುಟವು ರಾಜ್ಯದ ನವೀಕರಿಸಬಹುದಾದ ಇಂಧನ ನೀತಿ 2022-2027ನ್ನು ಏಪ್ರಿಲ್ ತಿಂಗಳಲ್ಲಿ ಅನುಮೋದಿಸಿತು. ಮುಂದಿನ ಐದು ವರ್ಷಗಳಲ್ಲಿ ನವೀಕರಿಸಬಹುದಾದ ವಿದ್ಯುತ್ ಉತ್ಪಾದನೆಯಲ್ಲಿ 10 ಗೆಗಾ ವ್ಯಾಟ್ ಸಾಮರ್ಥ್ಯದ ಹೆಚ್ಚಳಕ್ಕೆ ಕರೆ ನೀಡಿತು. ಮೇಲ್ಛಾವಣಿ ಸೌರ ಶಕ್ತಿಯು 2027ರ ವೇಳೆಗೆ ಕನಿಷ್ಠ 1 GW ಆಗಿರುತ್ತದೆ ಎಂದು ಅಂದಾಜಿಸಲಾಗಿದೆ.

ಭೂ ವಿಜ್ಞಾನಗಳ ಸಚಿವಾಲಯ ಮತ್ತು ಸೆಂಟರ್ ಫಾರ್ ಪ್ರೊಟೊಟೈಪ್ ಕ್ಲೈಮೇಟ್ ಮಾಡೆಲಿಂಗ್, ನ್ಯೂಯಾರ್ಕ್ ವಿಶ್ವವಿದ್ಯಾಲಯ, ಅಬುಧಾಬಿ, ಯುಎಇ ಅಡಿಯಲ್ಲಿ ಐಐಟಿಎಂ ಪುಣೆಯ ಸಂಶೋಧಕರಾದ ಟಿ.ಎಸ್. ಆನಂದ್, ದೀಪಾ ಗೋಪಾಲಕೃಷ್ಣನ್ ಮತ್ತು ಪಾರ್ಥಸಾರಥಿ ಮುಖೋಪಾಧ್ಯಾಯ ಅವರು ಕೈಗೊಂಡಿರುವ ‘ಹವಾಮಾನ ಮಾದರಿಗಳನ್ನು ಬಳಸಿಕೊಂಡು ಭಾರತದಲ್ಲಿ ಭವಿಷ್ಯದ ಪವನ ಮತ್ತು ಸೌರ ಸಾಮಥ್ರ್ಯದ ವಿಶ್ಲೇಷಣೆ’ ಅಧ್ಯಯನವು `ಪೀರ್-ರಿವ್ಯೂಡ್ ಜರ್ನಲ್ ಕರೆಂಟ್ ಸೈನ್ಸ್’ನಲ್ಲಿ ಪ್ರಕಟವಾಗಿದೆ.

- Advertisement -

ಇಂಟರ್ ಗವರ್ನಮೆಂಟಲ್ ಪ್ಯಾನೆಲ್ ಆನ್ ಕ್ಲೈಮೇಟ್ ಚೇಂಜ್ (IPCC) ರೂಪಿಸಿದ ಅತ್ಯಾಧುನಿಕ ಹವಾಮಾನ ಮಾದರಿಗಳನ್ನು ಬಳಸಿಕೊಂಡು ಭಾರತೀಯ ಉಪಖಂಡದಲ್ಲಿ ಮುಂದಿನ 40 ವರ್ಷಗಳಿಗಾಗಿ ಗಾಳಿ ಮತ್ತು ಸೌರ ಪ್ರಕ್ಷೇಪಣಗಳನ್ನು ಇದರಲ್ಲಿ ವಿಶ್ಲೇಷಿಸಲಾಗಿದೆ.

ಆಗಸ್ಟ್ 2, 2022ರಂದು ರಾಜ್ಯಸಭೆಯಲ್ಲಿ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ (MNRE) ಒದಗಿಸಿದ ಮಾಹಿತಿಯ ಪ್ರಕಾರ, ಏಪ್ರಿಲ್ 2021 ಮತ್ತು ಮೇ 2022ರ ನಡುವೆ 15,720.46 ದಶಲಕ್ಷ ಯುನಿಟ್ (MU) ಸೌರಶಕ್ತಿ ಉತ್ಪಾದನೆಯೊಂದಿಗೆ ಕರ್ನಾಟಕವು ರಾಷ್ಟ್ರದ ಅಗ್ರ 10 ರಾಜ್ಯಗಳಲ್ಲಿ ಒಂದಾಗಿದೆ. 2016ರಲ್ಲಿ 1,027 ಮೆಗಾವ್ಯಾಟ್ ಇದ್ದ ಕರ್ನಾಟಕದ ಸೌರ ಶಕ್ತಿ ಉತ್ಪಾದನೆಯು 2022ರ ವೇಳೆಗೆ 7,597 ಮೆಗಾವ್ಯಾಟ್ಗೆ ಏರಿಕೆ ಕಂಡಿದೆ. ಅನ್ಯ ರಾಜ್ಯಗಳಿಗೆ ಹೋಲಿಸಿದರೆ ಇದು ಗರಿಷ್ಠ ಏರಿಕೆಯಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಸಂಶೋಧಕರು ಪವನ ಸಾಮರ್ಥ್ಯದ ಅಧ್ಯಯನ ಮಾಡಿದ್ದು, ಕರ್ನಾಟಕದ ಮೇಲೆ ಪವನ ಶಕ್ತಿಯ ಪ್ರಕ್ಷೇಪಣವು ಹೆಚ್ಚು ಧನಾತ್ಮಕ ಸಾಮಥ್ರ್ಯವನ್ನು ತೋರಿಸಿದೆ. “ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಗಡಿ ಭಾಗದಲ್ಲಿ ಗಾಳಿಯ ವೇಗವು ಕೇಂದ್ರೀಕೃತವಾಗಿದೆ. ಅಲ್ಲಿ ಪವನ ವಿದ್ಯುತ್ ಘಟಕಗಳು ಸ್ಥಾಪನೆಯಾಗಿ, ಕಾರ್ಯ ನಿರ್ವಹಿಸುತ್ತಿವೆ. ಈ ಸಾಮರ್ಥ್ಯ ಹೆಚ್ಚಳವು ಎಲ್ಲ ಋತುಗಳಲ್ಲಿಯೂ ಕಂಡುಬರುತ್ತದೆ,” ಎಂದು ಮುಖೋಪಾಧ್ಯಾಯ ಹೇಳಿದ್ದಾರೆ.

ಅತಿ ಹೆಚ್ಚು ಪವನ ಶಕ್ತಿ ಸಾಮರ್ಥ್ಯ ಹೊಂದಿರುವ ಭಾರತದ ಟಾಪ್ 10 ರಾಜ್ಯಗಳಲ್ಲಿ ಕರ್ನಾಟಕವೂ ಸೇರಿದೆ. 2016 (2869 ಮೆ.ವ್ಯಾ.) ರಿಂದ 2022 (5182 ಮೆ.ವ್ಯಾ.) ವರೆಗೆ, ರಾಜ್ಯದ ಪವನ ಶಕ್ತಿ ಸಾಮರ್ಥ್ಯದಲ್ಲಿ 80.6% ಏರಿಕೆಯಾಗಿದೆ. ಕರ್ನಾಟಕದ ಇತ್ತೀಚಿನ ನವೀಕರಿಸಬಹುದಾದ ಇಂಧನ ನೀತಿಯು 2027ರ ವೇಳೆಗೆ 30 ಜಿಲ್ಲೆಗಳಲ್ಲಿ 1,24,139 ಮೆ.ವ್ಯಾ. ಪವನ ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಗುರುತಿಸಿದೆ.

ಹವಾಮಾನ ಬದಲಾವಣೆಯ ವಿರುದ್ಧ ಅಂತಾರಾಷ್ಟ್ರೀಯ ಹೋರಾಟಕ್ಕಾಗಿ ಆಗಸ್ಟ್ 3ರಂದು ಭಾರತವು ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆಗಳ (ಎನ್ ಡಿಸಿ ಗಳ) ಹೊಸ ಸೆಟ್ ಅನ್ನು ಪ್ರಕಟಿಸಿರುವುದರಿಂದ ಭವಿಷ್ಯದ ಮುನ್ಸೂಚನೆಗಳು ಮುಖ್ಯವಾಗಿವೆ. ಯುನೈಟೆಡ್ ನೇಷನ್ಸ್ ಫ್ರೇಮ್ ವರ್ಕ್ ಕನ್ವೆನ್ಷನ್ ಆನ್ ಕ್ಲೈಮೇಟ್ ಚೇಂಜ್ (UNFCCC) ಗೆ ನವೀಕರಿಸಿದ ಓಆಅ ಗಳ ಪ್ರಕಾರ, ಭಾರತವು 2030ರ ವೇಳೆಗೆ ನವೀಕರಿಸಬಹುದಾದ ಮೂಲಗಳಿಂದ 50% ಶಕ್ತಿಯ ಅಗತ್ಯಗಳನ್ನು ಪೂರೈಸುವ ಉದ್ದೇಶವನ್ನು ಹೊಂದಿದೆ. ಕಳೆದ ನವೆಂಬರ್ನಲ್ಲಿ ಗ್ಲಾಸ್ಗೋದಲ್ಲಿ ನಡೆದ COP26 ಸಮ್ಮೇಳನದಲ್ಲಿ ರಾಷ್ಟ್ರದ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು 500 ಗಿ.ವ್ಯಾಗೆ ಹೆಚ್ಚಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದರು.

“ನಮ್ಮ ಉದ್ಯಮವು ಬದಲಾಗುತ್ತಿರುವ ಹವಾಮಾನಕ್ಕೆ ಮತ್ತು ತಂತ್ರಜ್ಞಾನಗಳು ವೇಗಕ್ಕೆ ಹೊಂದಿಕೊಳ್ಳಬೇಕು. ಅಂತಹ ಭವಿಷ್ಯವಾಣಿಗಳನ್ನು ಸತ್ಯಗಳ ಬದಲಾಗಿ ಸಾಧ್ಯತೆಗಳಾಗಿ ತೆಗೆದುಕೊಳ್ಳಬೇಕು. ನವೀಕರಿಸಬಹುದಾದ ಶಕ್ತಿಯ ದಕ್ಷತೆಯು ಭಾರತದಲ್ಲಿ ಹವಾಮಾನ ಬದಲಾವಣೆಯಿಂದ ಋಣಾತ್ಮಕ ಪರಿಣಾಮ ಬೀರಬಹುದು, ಆದ್ದರಿಂದ ನಾವು ಇದಕ್ಕೆ ಸಿದ್ಧರಾಗಿರಬೇಕು” ಎಂದು ಮುಖೋಪಾಧ್ಯಾಯ ಹೇಳಿದರು.

ರಾಜ್ಯಸಭೆಯಲ್ಲಿ ಚರ್ಚೆ, ಕೇಂದ್ರ ಸಚಿವರ ಪ್ರತಿಕ್ರಿಯೆ

ಐಐಟಿಎಂ ಪುಣೆ ನಡೆಸಿರುವ “ಹವಾಮಾನ ಮಾದರಿಗಳನ್ನು ಬಳಸಿಕೊಂಡು ಭಾರತದ ಮೇಲೆ ಭವಿಷ್ಯದ ಪವನ ಮತ್ತು ಸೌರ ಸಾಮರ್ಥ್ಯದ ವಿಶ್ಲೇಷಣೆ” ಸಂಶೋಧನಾ ಅಧ್ಯಯನದ ಕುರಿತು ಸಂಸತ್ತಿನಲ್ಲಿ (ರಾಜ್ಯಸಭೆ) ಆಗಸ್ಟ್ 2, 2022ರಂದು ಚರ್ಚೆ ನಡೆಯಿತು. ಮಾದರಿಗಳು ದೇಶದಲ್ಲಿ ಸೌರ ವಿದ್ಯುತ್ ಉತ್ಪಾದನೆಯನ್ನು ಕಡಿಮೆ ಮಾಡುವ ಮತ್ತು ಕೆಲವು ಪ್ರಮುಖ ಪವನ ವಿದ್ಯುತ್ ಸ್ಥಾವರಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಹಾಗಿದ್ದಲ್ಲಿ, ಸೌರ ಮತ್ತು ಪವನ ವಿದ್ಯುತ್ ಸ್ಥಾವರಗಳ ದಕ್ಷತೆಯನ್ನು ಸುಧಾರಿಸಲು ಕೈಗೊಂಡ ಕ್ರಮಗಳೇನು? ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವನ್ನು ಪ್ರಶ್ನಿಸಲಾಯಿತು.

ಪವನ ಮತ್ತು ಸೌರ ವಿದ್ಯುತ್ ಸೌಲಭ್ಯಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸಲು ಸರ್ಕಾರವು ಕೈಗೊಂಡಿರುವ ಕ್ರಮಗಳನ್ನು ಕೇಂದ್ರ ಒಓಖಇ ಮತ್ತು ವಿದ್ಯುತ್ ಸಚಿವ ಸಚಿವ ಆರ್.ಕೆ. ಸಿಂಗ್ ವಿವರಿಸಿದರು:

ಸೌರ ಕೋಶಗಳ ದಕ್ಷತೆಯನ್ನು ಹೆಚ್ಚಿಸಲು, ಸಂಪನ್ಮೂಲಗಳ ಮೌಲ್ಯಮಾಪನ, ನಿಖರವಾದ ಮುನ್ಸೂಚನೆ ತಂತ್ರಗಳು, ಗಾಳಿ ಟರ್ಬೈನ್ ಗಳಿಗೆ ಹಬ್ ಎತ್ತರ ಹೆಚ್ಚಿಸುವುದು ಮತ್ತು ದೊಡ್ಡ ರೋಟರ್ ಬ್ಲೇಡ್ ಗಳ ತಯಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ “ನವೀಕರಿಸಬಹುದಾದ ಇಂಧನ ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿ ಕಾರ್ಯಕ್ರಮ” ಅಡಿಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಒಓಖಇ ಧನಸಹಾಯ ನೀಡುತ್ತಿದೆ.

•”ಅಧಿಕ ದಕ್ಷತೆಯ ಸೌರ Pಗಿ ಮಾಡ್ಯೂಲ್ ಗಳ” ಉತ್ಪಾದನೆಯನ್ನು ಉತ್ತೇಜಿಸಲು ಉತ್ಪಾದನೆ-ಸಂಯೋಜಿತ ರಾಷ್ಟ್ರೀಯ ಕಾರ್ಯಕ್ರಮದ ಅನುಷ್ಠಾನ.

ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ (ISB) ನಲ್ಲಿ ಭಾರತಿ ಇನ್ಸ್ ಟಿಟ್ಯೂಟ್ ಆಫ್ ಪಬ್ಲಿಕ್ ಪಾಲಿಸಿಯ ಸಂಶೋಧನಾ ನಿರ್ದೇಶಕ ಮತ್ತು ಸಹಾಯಕ ಪ್ರಾಧ್ಯಾಪಕ ಮತ್ತು 2020 ಮತ್ತು 2022ರ ನಡುವೆ ಬಿಡುಗಡೆ ಮಾಡಲಾದ ಎರಡು ವಿಭಿನ್ನ ವರದಿಗಳ ಲೇಖಕ ಡಾ. ಅಂಜಲ್ ಪ್ರಕಾಶ್ ಹೇಳುತ್ತಾರೆ:

“ವಿಜ್ಞಾನಿಗಳು ಮಾಡಿದ ಈ ಬಹುಮುಖ್ಯ ಅಧ್ಯಯನವು, ಸೌರ ಮತ್ತು ಪವನ ಶಕ್ತಿಯ ಭವಿಷ್ಯದ ಸಾಮರ್ಥ್ಯವನ್ನು ತೋರಿಸುತ್ತದೆ. ಸೌರ ಮತ್ತು ಪವನ ವಿದ್ಯುತ್ ಕ್ಷೇತ್ರಗಳಲ್ಲಿ ನವೀಕರಿಸಬಹುದಾದ ಶಕ್ತಿಯನ್ನು ಬಳಸಿಕೊಳ್ಳಲು ತನ್ನ ಸಾಮರ್ಥ್ಯವನ್ನು ಭಾರತವು ಸಂಪೂರ್ಣವಾಗಿ ವಿನಿಯೋಗಿಸಿಲ್ಲ ಎನ್ನುವುದು ಸಮಸ್ಯೆ. ಈ ಅಧ್ಯಯನವು ಭವಿಷ್ಯದ ಪ್ರಕ್ಷೇಪಗಳನ್ನು ತೋರಿಸುತ್ತದೆ ಮತ್ತು ಪಾಲಿಸಿ ಮತ್ತು ವ್ಯವಹಾರ ನಿರ್ಧಾರಗಳಿಗೆ ತುಂಬಾ ಅನುಕೂಲಕರವಾಗಿರುತ್ತದೆ. ಆದರೂ, ಸೌರ ಮತ್ತು ಪವನ ಶಕ್ತಿ ಎರಡನ್ನೂ ವಿಕೇಂದ್ರೀಕರಿಸುವುದು ಆಸಕ್ತಿದಾಯಕ ಸವಾಲಾಗಿದೆ ಎಂದು ಸೂಚಿಸಲು ನಾನು ಬಯಸುತ್ತೇನೆ. ಸೌರಶಕ್ತಿಯ ಕಾರ್ಯಕ್ರಮ ಪ್ರತಿ ಮನೆಯನ್ನೂ ತಲುಪಬಹುದು. ಅಲ್ಲಿ ಸಾಮರ್ಥ್ಯವನ್ನು ಹೊಂದಿರುವ ಪ್ರತಿಯೊಬ್ಬರೂ ಈ ಪ್ರಕ್ರಿಯೆಗೆ ಕೊಡುಗೆ ನೀಡಬಹುದು. ಸಬ್ಸಿಡಿಗಳು ಲಭ್ಯವಿವೆ. ಇದರ ಹೊರತಾಗಿಯೂ, ವಿವಿಧ ಪಾಲಿಸಿಗಳು ಮತ್ತು ಆಡಳಿತಾತ್ಮಕ ಅಡೆತಡೆಗಳಿಂದಾಗಿ ಮನೆಗಳಲ್ಲಿ ಸೌರ ವ್ಯವಸ್ಥೆಗಳನ್ನು ಸ್ಥಾಪಿಸಲು ಸಾಧ್ಯವಾಗುವುದಿಲ್ಲ. ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ಇವುಗಳನ್ನು ಗಮನಿಸಿ, ಪರಿಸರ ವ್ಯವಸ್ಥೆಯನ್ನು ರಚಿಸುವುದಕ್ಕಾಗಿ ಆಸಕ್ತರು ತೊಂದರೆಗಳಿಲ್ಲದೆ ಸೌರ ಮತ್ತು ಪವನ ಶಕ್ತಿ ಘಟಕಗಳನ್ನು ಸ್ಥಾಪಿಸಲು ಅನುಕೂಲ ಕಲ್ಪಿಸಬಹುದು. ಇಲ್ಲಿ ಉದ್ಯಮಿಗಳ ಪಾತ್ರ ಬಹಳ ಮುಖ್ಯವಾಗಿದ್ದು, ಅದನ್ನು ಬಲಪಡಿಸಬಹುದು ಎಂದು ಅವರು ಹೇಳುತ್ತಾರೆ.

ಅಧ್ಯಯನದ ಕುರಿತು ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಡಾ. ಪಾರ್ಥಸಾರಥಿ ಮುಖೋಪಾಧ್ಯಾಯ – [email protected]



Join Whatsapp