ಬೀದರ್ | ಇರ್ಟಿಗಾ ಕಾರು, ಕಂಟೆನರ್ ಲಾರಿ ನಡುವೆ ಭೀಕರ ಅಪಘಾತ; ನಾಲ್ವರು ಸಾವು

Prasthutha|

ಬೀದರ್: ಸುಝುಕಿ ಇರ್ಟಿಗಾ ಕಾರು ಮತ್ತು ಕಂಟೈನರ್ ನಡುವೆ ಉಂಟಾದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಅಸುನೀಗಿರುವ ಘಟನೆ ಬೀದರ್ ನಲ್ಲಿ ವರದಿಯಾಗಿದೆ.

- Advertisement -

ಮೃತಪಟ್ಟವರನ್ನು ಹೈದರಾಬಾದ್ ನ ಬೇಗಂ ಪೇಟೆ ನಿವಾಸಿಗಳೆಂದು ಹೇಳಲಾಗಿದೆ.

ಹೈದರಾಬಾದ್’ನಿಂದ ಕಲ್ಬುರ್ಗಿಯ ಗಾಣಗಾಪುರ ದೇವಸ್ಥಾನಕ್ಕೆ ಹೋಗುವ ವೇಳೆ ರಾಷ್ಟ್ರೀಯ ಹೆದ್ದಾರಿ ಭಂಗೂರ ಎಂಬಲ್ಲಿ ಈ ಅಪಘಾತ ಉಂಟಾದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿದ್ದು, ಐದು ಮಂದಿ ಗಂಭೀರವಾಗಿ ಗಾಯಗೊಂಡು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿವೆ.

- Advertisement -

ಐವರು ಗಾಯಾಳುಗಳಿಗೆ ಬೀದರ್’ನ ಬ್ರೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸ್ಥಳಕ್ಕೆ ಮನ್ನಳಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.



Join Whatsapp