ಉಳ್ಳಾಲ | ಕಿಂಡರ್ ಗಾರ್ಡನ್ ಶಾಲೆಯ ಮಾಲಕಿ ಆತ್ಮಹತ್ಯೆ

Prasthutha|

ಉಳ್ಳಾಲ: ಕಿಂಡರ್ ಗಾರ್ಡನ್ ಶಾಲೆಯ ಮಾಲಕಿ ಹಾಗೂ ಶಿಕ್ಷಕಿಯೋರ್ವಳು ಸಮುದಾಯ ಆರೋಗ್ಯ ಕೇಂದ್ರದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಳ್ಳಾಲದ ಪೇಂಟೆಯಲ್ಲಿ ನಡೆದಿದೆ.

- Advertisement -

ಮೃತರನ್ನು ಹರಿಣಾಕ್ಷಿ (51) ಎಂದು ಗುರುತಿಸಲಾಗಿದ್ದು, ಅಗ್ನಿಶಾಮಕದಳದ ಸಿಬ್ಬಂದಿ ಮತ್ತು ಸ್ಥಳೀಯರು ಸೇರಿಕೊಂಡು ಮೃತದೇಹವನ್ನು ಬಾವಿಯಿಂದ ಮೇಲೆಕೆತ್ತಿದ್ದಾರೆ.

ಮೃತ ಹರಿಣಾಕ್ಷಿ ಪತಿ ಬಸವರಾಜ್ ವೃತ್ತಿಯಲ್ಲಿ ವಕೀಲರಾಗಿದ್ದು, ಹಿರಿಯ ಪುತ್ರ ನಿತಿನ್ ರಾಜ್ ಇನ್ಫೋಸಿಸ್’ನಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ಅವರ ಕಿರಿಯ ಮಗ ಅಮಿತ್ ರಾಜ್ ಎಲೋಶಿಯಸ್ ಕಾಲೇಜಿನಲ್ಲಿ ಬಿಬಿಎ ಕಲಿಯುತ್ತಿದ್ದಾರೆ.

- Advertisement -

ಬೆಳಿಗ್ಗೆಯಿಂದ ನಾಪತ್ತೆಯಾಗಿದ್ದ ಹರಿಣಾಕ್ಷಿ ಅವರ ಮೃತದೇಹ ಉಳ್ಳಾಲದ ಸಮುದಾಯ ಆರೋಗ್ಯ ಕೇಂದ್ರದ ಬಾವಿಯಲ್ಲಿ ಪತ್ತೆಯಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.



Join Whatsapp