ಪರೇಶ್ ಮೆಸ್ತಾ ಪ್ರಕರಣ: ಆರೋಪಿಗೆ ವಕ್ಫ್ ಬೋರ್ಡ್ ಉಪಾಧ್ಯಕ್ಷ ಸ್ಥಾನ: ಬಿಜೆಪಿ ವಿರುದ್ಧ ಆಕ್ರೋಶ

Prasthutha|

ಕಾರವಾರ: ಉತ್ತರ ಕನ್ನಡ ಜಿಲ್ಲೆ ಕರಾವಳಿ ಭಾಗದಲ್ಲಿ ಪರೇಶ್ ಮೇಸ್ತಾ ಕೊಲೆ ಪ್ರಕರಣದ ಆರೋಪಿಯಾಗಿದ್ದ ಆಜಾದಿ ಅಣ್ಣಿಗೇರಿಗೆ ಜಿಲ್ಲಾ ವಕ್ಫ್ ಬೋಡ್೯ನ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ. ಈ ಬಗ್ಗೆ ಹಿಂದುತ್ವ ಕಾರ್ಯಕರ್ತರು ಸರಕಾರವನ್ನು ಟೀಕಿಸಿದ್ದು, ಬಿಜೆಪಿ ವಿರುದ್ಧ ಆಕ್ರೋಶಗೊಂಡಿದ್ದಾರೆ.

- Advertisement -

2017ರ ಡಿಸೆಂಬರ್ 6 ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದ ಗಲಭೆಯಲ್ಲಿ 21 ವರ್ಷದ ಪರೇಶ್ ಮೇಸ್ತಾ ಕಾಣೆಯಾಗಿದ್ದ. ಡಿಸೆಂಬರ್ 8 ರಂದು ಹೊನ್ನಾವರದ ಶನಿ ದೇವಾಲಯದ ಹಿಂಭಾಗದಲ್ಲಿನ ಶೆಟ್ಟಿ ಕೆರೆಯಲ್ಲಿ ಆತನ ಶವ ಪತ್ತೆಯಾಗಿತ್ತು. ಈ  ಕೊಲೆಯಲ್ಲಿ ಅನ್ಯ ಕೋಮಿನ ಕೈವಾಡವಿದೆ ಎಂದು ಅನುಮಾನಿಸಿ, ಅಂದಿನ ಕಾಂಗ್ರೆಸ್ ಸರ್ಕಾರದ ವಿರುದ್ದ ಜಿಲ್ಲೆಯಲ್ಲಿ ಬೆಂಕಿ ಜ್ವಾಲೆಯೇ ಹತ್ತಿತ್ತು  ಮತ್ತು ಅಂದಿನ ಸಿದ್ದರಾಮಯ್ಯ ಸರ್ಕಾರ ಈ ಪ್ರಕರಣದ ತನಿಖೆಯನ್ನು ಸಿಬಿಐ ಗೆ ಒಪ್ಪಿಸಿತ್ತು.

ತನಿಖೆಯು ಸಿಬಿಐಗೆ ವಹಿಸಿ ನಾಲ್ಕು ವರ್ಷ ಸಂದರೂ ಇದುವರೆಗೂ  ವರದಿ ಬಂದಿಲ್ಗ.  2018ರ ಏಪ್ರಿಲ್ 23ರಂದು ಚೆನ್ನೈ ಸಿಬಿಐ ವಿಭಾಗದಲ್ಲಿ ದಾಖಲಾಗಿದ್ದ ಎಫ್ಐಆರ್ ನಲ್ಲಿ ನಮೂದಾಗಿದ್ದ ಆರೋಪಿಗಳೆಲ್ಲರೂ ಜಾಮೀನಿನ ಮೇಲೆ ಬಿಡುಗಡೆ ಕೂಡ ಆಗಿದ್ದಾರೆ. ಆದರೆ ಪರೇಶನ ಸಾವಿಗೆ ನಿಖರ ಕಾರಣ ಮಾತ್ರ ಇನ್ನೂ ತಿಳಿದುಬಂದಿಲ್ಲ.

- Advertisement -

ಅಂದು ಒಂದನೇ ಆರೋಪಿಯಾಗಿದ್ದ ಆಜಾದಿ ಅಣ್ಣಿಗೇರಿಗೆ ಈಗ ವಕ್ಫ್ ಬೋಡ್೯ನ ಉಪಾಧ್ಯಕ್ಷ ಸ್ಥಾನ ನೀಡಲಾದ ಬಿಜೆಪಿ ನಡೆ ಬಗ್ಗೆ ಹಿಂದುತ್ವದ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ. ವಕ್ಫ್ ಬೋರ್ಡ್ ಪದಾಧಿಕಾರಿಗಳನ್ನ ಬದಲಿಸುವಂತೆ ಸಚಿವರಿಗೆ ಪತ್ರ ಬರೆದಿದ್ದಾರೆ. ಈ ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಬಿಜೆಪಿ ವಿರುದ್ಧ ಕಾರ್ಯಕರ್ತರು ಕೆಂಡಾಮಂಡಲವಾಗಿದ್ದಾರೆ.



Join Whatsapp