ನಕಲಿ ನೋಟು ಚಲಾವಣೆ: ಬಿಜೆಪಿ ಮಾಜಿ ಶಾಸಕನ ಹೆಂಡತಿಗೆ 4 ವರ್ಷ ಜೈಲು

Prasthutha|

ಜಾರ್ಖಂಡ್: ಬಿಜೆಪಿ ಮಾಜಿ ಶಾಸಕ ಪುಟ್ಕರ್ ಹೆಂಬ್ರೋಮ್ ಅವರ ಎರಡನೇ ಪತ್ನಿ ಮಲಯಾ ಹೆಂಬ್ರೋಮ್ ಗೆ ನಕಲಿ ನೋಟುಗಳನ್ನು ಚಲಾವಣೆ ಮಾಡಿದ ಆರೋಪದ ಮೇಲೆ ಜಾರ್ಖಂಡ್ ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯ ನ್ಯಾಯಾಲಯವು ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

- Advertisement -

ಮಟ್ಕಮಹತು ಗ್ರಾಮದ ನಿವಾಸಿ ಜಯಂತಿ ದೇವಗಮ್ ಎಂಬವರು 2020 ರ ಸೆಪ್ಟೆಂಬರ್ ನಲ್ಲಿ ಮುಫಾಸಿಲ್ ಪೊಲೀಸ್ ಠಾಣೆಯಲ್ಲಿ ಮಲಯಾ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಮಲಯಾ ತನ್ನ ಅಂಗಡಿಯಿಂದ 1,600 ರೂ ಮೌಲ್ಯದ ವಸ್ತುಗಳನ್ನು ಖರೀದಿಸಿ 2,000 ರೂ.ಗಳ ನೋಟನ್ನು ನೀಡಿದ್ದಾಳೆ. ನಾನು ಅದನ್ನು ಠೇವಣಿ ಇಡಲು ಬ್ಯಾಂಕ್ ಗೆ ಹೋದಾಗ, ನೋಟನ್ನು ಸ್ವೀಕರಿಸಲಿಲ್ಲ. ಮರುದಿನ ನೋಟನ್ನು ಸ್ಥಳೀಯ ಅಂಗಡಿಗೆ ನೀಡಿದಾಗ, ಅದು ನಕಲಿ ನೋಟು ಎಂದು ತಿಳಿಯಿತು ಎಂದು ಜಯಂತಿ ತನ್ನ ಹೇಳಿಕೆಯಲ್ಲಿ ತಿಳಿಸಿದ್ದರು.

- Advertisement -

ಮಾಹಿತಿ ತಿಳಿದ ಪೊಲೀಸ್ ಗಸ್ತು ತಂಡವು ನಕಲಿ ನೋಟಿನಿಂದ ಮಲಯಾ ಳನ್ನು ಬಂಧಿಸಿದ್ದು, ದೆಹಲಿಯಿಂದ 500 ರೂ.ಗೆ ನಕಲಿ ನೋಟುಗಳನ್ನು ಖರೀದಿಸಿ, ಅದನ್ನು ಇಲ್ಲಿ ಚಲಾವಣೆಗೆ ತರಲು ಪ್ರಯತ್ನಿಸಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು,

ಇದೀಗ ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸೂರ್ಯಭೂಷಣ್ ಓಜಾ ಅವರು ಆಗಸ್ಟ್ 10ರ ಬುಧವಾರ ಮಲಯಾ ಹೆಂಬ್ರೋಮ್ ಅವರಿಗೆ 4 ವರ್ಷ ಜೈಲು ಶಿಕ್ಷೆ ಹಾಗೂ 5,000 ರೂ.ಗಳ ದಂಡ ವಿಧಿಸಿದ್ದಾರೆ.



Join Whatsapp