ದೆಹಲಿ ಭೇಟಿ ಬಳಿಕ ಶೆಟ್ಟರ್- ಯಡಿಯೂರಪ್ಪ ರಹಸ್ಯ ಮಾತುಕತೆ: ಬಿಜೆಪಿ ಪಾಳಯದಲ್ಲಿ ಕೆರಳಿದ ಕುತೂಹಲ

Prasthutha|

ಬೆಂಗಳೂರು: ದೆಹಲಿ ಹೈಕಮಾಂಡ್ ಭೇಟಿ ಬಳಿಕ ರಾಜ್ಯಕ್ಕೆ ಮರಳಿದ್ದ ಜಗದೀಶ್ ಶೆಟ್ಟರ್ ವಿಮಾನ ನಿಲ್ದಾಣದಿಂದ ನೇರವಾಗಿ ಯಡಿಯೂರಪ್ಪ ನಿವಾಸದತ್ತ ಧಾವಿಸಿದ್ದು, ಕೆಲ ಕಾಲ ರಹಸ್ಯ ಮಾತುಕತೆ ನಡೆಸಿದ್ದಾರೆ.

- Advertisement -

‌ಯಡ್ಡಿ ಬೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತಾಡಲು ನಿರಾಕರಿಸಿದ ಶೆಟ್ಟರ್ , ಭೇಟಿ ಬಗ್ಗೆ ಯಾವುದೇ ಸುಳಿವು ನೀಡದೆ ಹೊರಟು ಹೋಗಿದ್ದಾರೆ. ಆ ಬಳಿಕ ಮಾಧ್ಯಮ ಪ್ರತಿನಿಧಿಯೊಬ್ಬರಿಗೆ ಪ್ರತಿಕ್ರಿಯೆ ನೀಡಿದ ಶೆಟ್ಟರ್ ರಾಜ್ಯ ರಾಜಕಾರಣದಲ್ಲಿ ಏನೋ ಬೆಳವಣಿಗೆ ಆಗುತ್ತಾ ಇದೆ, ನನಗೂ ಆ ಬಗ್ಗೆ ಸಂಪೂರ್ಣ ಮಾಹಿತಿಯಿಲ್ಲ ಎಂದು ಹೇಳಿದ್ದಾರೆ.

ಶೆಟ್ಟರ್ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ರಾಜ್ಯದಲ್ಲಿ ಸಿಎಂ ಬದಲಾವಣೆ ಆಗುವ ಸಾಧ್ಯತೆಯೇ ಇಲ್ಲ, ಆದರೆ ಅಧ್ಯಕ್ಷರ ಅವದಿ ಮುಗಿದು ಸಹಜವಾಗಿ ಮತ್ತೊಬ್ಬರ ಆಯ್ಕೆ ನಡೆಯಲೇಬೇಕು ಎಂದು ಹೇಳಿದ್ದಾರೆ.

- Advertisement -

ವಿಜಯೇಂದ್ರರಿಗೆ ರಾಜ್ಯಾಧ್ಯಕ್ಷ ಸ್ಥಾನ ಸಿಗುತ್ತಾ ಎಂಬ ಪ್ರಶ್ನೆಗೆ ಅದು ಹೈಕಮಾಂಡ್ ಗೆ ಬಿಟ್ಟದ್ದು, ಈಗಲೇ ಏನೂ ಹೇಳೋಕೆ ಬಯಸಲ್ಲ ಎಂದು ತಿಳಿಸಿದರು.

ಅಮಿತ್ ಶಾ ಭೇಟಿ ಬಳಿಕ ಬೊಮ್ಮಾಯಿ ಬದಲಾವಣೆ ಬಗ್ಗೆ ರಾಜ್ಯದಲ್ಲಿ ಊಹಾಪೋಹಗಳು ಉಂಟಾಗಿದ್ದು, ಇದು ಕಾಂಗ್ರೆಸ್ ನ ಕಪೋಕಲ್ಪಿತ ಕತೆಯಷ್ಟೇ ಎಂದು ಬಿಜೆಪಿ ನಾಯಕರೆಲ್ಲರೂ ಟೀಕಿಸಿದ್ದಾರೆ. ಸಿಎಂ ಬದಲಾವಣೆ ಇಲ್ಲ ಎಂದು ಬಿಜೆಪಿಗರು ಹೇಳುತ್ತಿದ್ದರೂ ಶೆಟ್ಟರ್ ಯಡಿಯೂರಪ್ಪ ಮಾತುಕತೆ ಕುತೂಹಲ ಮೂಡಿಸಿದೆ



Join Whatsapp