ಸುಪ್ರೀಂ ಕೋರ್ಟ್ 49 ನೇ ನ್ಯಾಯಮೂರ್ತಿಯಾಗಿ ಯು.ಯು.ಲಲಿತ್ ನೇಮಕ

Prasthutha|

ನವದೆಹಲಿ: ಸುಪ್ರೀಂ ಕೋರ್ಟ್ ನ ಹಿರಿಯ ನ್ಯಾಯಮೂರ್ತಿ ಯು.ಯು.ಲಲಿತ್ ಅವರನ್ನು ಭಾರತದ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ಬುಧವಾರ ನೇಮಕ ಮಾಡಲಾಗಿದೆ.

- Advertisement -

ಆಗಸ್ಟ್ 26 ರಂದು ಅಧಿಕಾರದಿಂದ ನಿರ್ಗಮಿಸುವ ಹಾಲಿ ಸಿಜೆಐ ಎನ್.ವಿ.ರಮಣ ಅವರ ಉತ್ತರಾಧಿಕಾರಿಯಾಗಿ ಲಲತ್ ಆಯ್ಕೆಯಾಗಿದ್ದಾರೆ.

ಭಾರತದ ಸಂವಿಧಾನವು ನೀಡಿದ ಅಧಿಕಾರವನ್ನು ಚಲಾಯಿಸಲು, 2022 ರ ಆಗಸ್ಟ್ 27 ರಿಂದ ಜಾರಿಗೆ ಬರುವಂತೆ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿ ಶ್ರೀ ಉದಯ್ ಉಮೇಶ್ ಲಲಿತ್ ಅವರನ್ನು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲು ಭಾರತದ ರಾಷ್ಟ್ರಪತಿಗಳು ಸಂತೋಷಪಡುತ್ತಾರೆ ಎಂದು ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

- Advertisement -

ನ್ಯಾಯಮೂರ್ತಿ ಲಲಿತ್, ಬಾರ್ ನಿಂದ ನೇರವಾಗಿ ಸುಪ್ರೀಂ ಕೋರ್ಟ್ ಪೀಠಕ್ಕೆ ಬಡ್ತಿ ಪಡೆದ ಎರಡನೇ ಸಿಜೆಐ ಆಗಿದ್ದಾರೆ. ಇದಕ್ಕೂ ಮೊದಲು, ಜನವರಿ 1971 ರಲ್ಲಿ ನೇಮಕಗೊಂಡ ಭಾರತದ 13 ನೇ ಸಿಜೆಐ ಆಗಿದ್ದ ನ್ಯಾಯಮೂರ್ತಿ ಎಸ್.ಎಂ.ಸಿಕ್ರಿ ಅವರು ಮಾರ್ಚ್ 1964 ರಲ್ಲಿ ಸುಪ್ರೀಂ ಕೋರ್ಟ್ ಪೀಠಕ್ಕೆ ನೇರವಾಗಿ ಬಡ್ತಿ ಪಡೆದ ಮೊದಲ ವಕೀಲರಾಗಿದ್ದರು.

Join Whatsapp