ಭೂ ಕುಸಿತ ಆತಂಕ: ಮಡಿಕೇರಿ – ಸಂಪಾಜೆ ಹೆದ್ದಾರಿ ಬಂದ್

Prasthutha|

ಮಡಿಕೇರಿ: ಹೆದ್ದಾರಿ ಭೂಕುಸಿತ ಆತಂಕದ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ರಾತ್ರಿ 8.30 ರಿಂದ ಬೆಳಗ್ಗೆ 6.30 ಗಂಟೆಯವರೆಗೆ ಮಡಿಕೇರಿ – ಸಂಪಾಜೆ ಹೆದ್ದಾರಿ ಬಂದ್ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

- Advertisement -


ಮದೆನಾಡು ಬಳಿ ಭೂಕುಸಿತದ ಭೀತಿ ಉಂಟಾಗಿದ್ದು, ಯಾವುದೇ ಕ್ಷಣದಲ್ಲಿ ಮಣ್ಣು ಜರಿದು ಹೆದ್ದಾರಿಗೆ ಬೀಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಜಿಲ್ಲಾಧಿಕಾರಿ ಸಂಪಾಜೆ – ಮಡಿಕೇರಿ ನಡುವೆ ಇಂದು ರಾತ್ರಿ 8.30 ರಿಂದ ನಾಳೆ ಬೆಳಗ್ಗೆ 6.30 ಗಂಟೆಯವರೆಗೆ ಹಾಗೂ ನಾಳೆ ರಾತ್ರಿ 8.30 ಗಂಟೆಯಿಂದ ನಾಡಿದ್ದು ಬೆಳಗ್ಗೆ 6.30 ಗಂಟೆಯವರೆಗೆ ಎಲ್ಲಾ ರೀತಿಯ ವಾಹನ ಸಂಚಾರ ಬಂದ್ ಮಾಡಲಾಗಿದೆ ಎಂದು ಕೊಡಗು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಆದೇಶ ಹೊರಡಿಸಿದ್ದಾರೆ.



Join Whatsapp