ನ್ಯಾಯಮೂರ್ತಿ ಯು.ಯು.ಲಲಿತ್ 49ನೆ ಸಿಜೆಐ ಆಗಿ ನೇಮಕಗೊಳಿಸಿ ರಾಷ್ಟ್ರಪತಿ ಆದೇಶ

Prasthutha|

ನವದೆಹಲಿ: ಭಾರತದ ಸುಪ್ರೀಂಕೋರ್ಟ್ ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಉದಯ್ ಉಮೇಶ್ ಲಲಿತ್ ಅವರನ್ನು ನೇಮಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಆದೇಶ ಹೊರಡಿಸಿದ್ದಾರೆ.
2022, ಆಗಸ್ಟ್ 22ರಿಂದ ಜಾರಿಗೆ ಬರುವಂತೆ ಅವರ ನೇಮಕವಾಗಲಿದೆ ಎಂದು ರಾಷ್ಟ್ರಪತಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಯು.ಯು.ಲಲಿತ್ ಅವರು 49ನೇ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ. ಆಗಸ್ಟ್ 26ರಂದು ಈಗಿನ ಸಿಜೆಐ ಎನ್.ವಿ.ರಮಣ ಅವರು ನಿವೃತ್ತರಾಗಲಿದ್ದಾರೆ.
ಜಸ್ಟಿಸ್ ಯು. ಯು. ಲಲಿತ್ ಸಿಜೆಐ ಆದಲ್ಲಿ ಬಾರ್ ಕೌನ್ಸಿಲ್ ನಿಂದ ನೇರ ಸುಪ್ರೀಂ ಕೋರ್ಟಿಗೆ ನೇಮಕರಾದವರಲ್ಲಿ ಸಿಜೆಐ ಆದ ಎರಡನೆಯವರಾಗಿರುತ್ತಾರೆ. 1971ರಲ್ಲಿ 13ನೇ ಸಿಜೆಐ ಆಗಿದ್ದ ಎಸ್. ಎಂ. ಸಿಕ್ರಿಯವರು ಬಾರ್ ಕೌನ್ಸಿಲ್ ನಿಂದ ನೇರವಾದವರಲ್ಲಿ ಮೊದಲಿಗರು. ಅವರು 1964ರಲ್ಲಿ ನೇರ ವಕೀಲಿಕೆಯಿಂದ ಸುಪ್ರೀಂ ಕೋರ್ಟಿಗೆ ನೇಮಕಗೊಂಡಿದ್ದರು.
ತ್ರಿವಳಿ ತಲಾಖ್ ಸಹಿತ ಕೆಲವು ವಿಶೇಷ ಪ್ರಕರಣಗಳಲ್ಲಿ ಜಸ್ಟಿಸ್ ಯು. ಯು. ಲಲಿತ್ ತೀರ್ಪು ನೀಡಿದ್ದಾರೆ.

Join Whatsapp