ಕಾಫಿನಾಡಲ್ಲಿ ಮಳೆ ಅಬ್ಬರ; ಮನೆ ಮೇಲೆ ಮರ ಬಿದ್ದುಇಬ್ಬರು ಮಹಿಳೆಯರು ಮೃತ್ಯು

Prasthutha|

ಚಿಕ್ಕಮಗಳೂರು : ಭಾರೀ ಗಾಳಿ ಮಳೆಗೆ ಮನೆ ಮೇಲೆ ಮರ ಬಿದ್ದು ಇಬ್ಬರು ಮಹಿಳೆಯರು ಮೃತಪಟ್ಟ ಘಟನೆ ಮೂಡಿಗೆರೆ ತಾಲೂಕಿನ ಕೆ.ತಲಗೂರು ಗ್ರಾಮದಲ್ಲಿ ನಡೆದಿದೆ.

- Advertisement -

ಚಂದ್ರಮ್ಮ, ಸರಿತಾ ಮೃತ ದುರ್ದೈವಿಗಳು. ರಾತ್ರಿ ಮಲಗಿದ್ದ ವೇಳೆ ಮನೆ ಪಕ್ಕದ ಬೃಹತ್ ಮರ ಮನೆ ಮೇಲೆ ಬಿದ್ದ ಪರಿಣಾಮ ಸರಿತಾ ಅವರು ಮಲಗಿದ್ದಲ್ಲೇ ಪ್ರಾಣ ಬಿಟ್ಟಿದ್ದಾರೆ.

ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಚಂದ್ರಮ್ಮ ಸಾವನ್ನಪ್ಪಿದ್ದಾರೆ.  ಸರಿತಾ-ಚಂದ್ರಮ್ಮ ಸಂಬಂಧಿಗಳಾಗಿದ್ದು, ಅಕ್ಕ-ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದರು. ಚಂದ್ರಮ್ಮ ರವರ ಮನೆಯ ಮೇಲೆ ಬಿದ್ದು  ಈ ದುರ್ಘಟನೆ ಸಂಭವಿಸಿದೆ.

- Advertisement -

ಚಂದ್ರಮ್ಮ ರವರ ಗಂಡ ಐತಪ್ಪ ಸುಮಾರು ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದು,  ಚಂದ್ರಮ್ಮ ರವರಿಗೆ  ಶ್ಯಾಮ್ (22) ನಾರಾಯಣ (30) ಎಂಬ ಇಬ್ಬರು ಮಕ್ಕಳಿದ್ದಾರೆ.

ಸರಿತಾರವರ ಇಬ್ಬರು ಮಕ್ಕಳು ಸುನೀಲ್(14), ದೀಕ್ಷಿತ್ (12 )ಕೂಡ ಅಲ್ಲೇ ಇದ್ದರು.  ಆದರೆ ಅದೃಷ್ಟವಶಾತ್ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.



Join Whatsapp