ಬರ್ಮಿಂಗ್ಹ್ಯಾಮ್: ಕಾಮನ್‌ವೆಲ್ತ್ ಗೇಮ್ಸ್‌ನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತದ ತೇಜಸ್ವಿನ್ ಶಂಕರ್ ಕಂಚು ಗೆದ್ದು ದಾಖಲೆ ಬರೆದರು. ಏಕೆಂದರೆ ಭಾರತಕ್ಕೆ ಈ ಪಂದ್ಯಾವಳಿಯಲ್ಲಿ ಮತ್ತು ಅಂತರರಾಷ್ಟ್ರೀಯವಾಗಿ ಇದು ಮೊದಲ ಹೈಜಂಪ್ ಪದಕವಾಗಿದೆ.
ಮೂರನೆಯ ಸ್ಥಾನ ನಿರ್ಣಯಕ್ಕೆ ನಡೆದ ಎತ್ತರ ಜಿಗಿತದಲ್ಲಿ ಇಂಗ್ಲೆಂಡಿನ ಜೋಯೆಲ್ ಕ್ಲರ್ಕ್ ಸಹ ತೇಜಸ್ವಿನ್‌ರಂತೆಯೇ 2.22 ಮೀಟರ್ ಎತ್ತರ ಜಿಗಿದರು. ಜೋಯೆಲ್ ಎರಡನೇ ಪ್ರಯತ್ನದಲ್ಲಿ ಅಷ್ಟು ಜಿಗಿದರೆ ತೇಜಸ್ವಿನ್ ಮೊದಲ ಪ್ರಯತ್ನದಲ್ಲೇ ಆ ಎತ್ತರ ಹಾರಿದ್ದರಿಂದ ಪೈಪೋಟಿಯಿಂದ ಕಂಚು ದಕ್ಕಿಸಿಕೊಂಡರು.