ಬೆಂಗಳೂರು: ಬಿಬಿಎಂಪಿ ಚುನಾವಣೆಗೆ 234 ವಾರ್ಡ್ ಗಳ ಮೀಸಲಾತಿ ಪಟ್ಟಿ ರಾತ್ರೋರಾತ್ರಿ ಸರ್ಕಾರ ಬಿಡುಗಡೆ ಮಾಡಿದ್ದು, ಬಿಜೆಪಿಯ ಹಲವು ಟಿಕೇಟ್ ಆಕಾಂಕ್ಷಿಗಳು ಆಕ್ರೋಶಗೊಂಡಿದ್ದಾರೆ.
ಸರಕಾರ ಬಿಡುಗಡೆ ಮಾಡಿದ ಪಟ್ಟಿಯ ಪ್ರಕಾರ, 234 ವಾರ್ಡ್ ಗಳಲ್ಲಿ, ಸಾಮಾನ್ಯ ವರ್ಗ ಮತ್ತು 129 ವಾರ್ಡ್ ಗಳಲ್ಲಿ ಸಾಮಾನ್ಯ ವರ್ಗದ ಮಹಿಳೆಯರು ಸ್ಪರ್ಧಿಸಬಹುದು ಎಂದು ತಿಳಿಸಿದ್ದು, ಮೀಸಲಾತಿ ನಿಗಧಿ ಜನಸಂಖ್ಯೆಗೆ ಅನುಗುಣವಾಗಿ ನಡೆದಿಲ್ಲ ಎಂಬ ಆರೋಪದ ಜೊತೆಗೆ ಕೆಲ ಶಾಸಕರು ತಮಗಾದವರಿಗೆ ಟಿಕೆಟ್ ಕೊಡಿಸುವ ಉದ್ದೇಶದಿಂದಲೇ ಮನಸೋ ಇಚ್ಚೆ ಮೀಸಲಾತಿ ವಿಂಗಡಿಸಿದ್ದಾರೆ ಎಂದು ಬಿಜೆಪಿ ಬೆಂಬಲಿತ ಆಕಾಂಕ್ಷಿಗಳೇ ಆರೋಪಿಸಿದ್ದಾರೆ.
ಸರಕಾರ ಪ್ರಕಟಿಸಿದ ವಾರ್ಡ್ ಮೀಸಲಾತಿ ಬಗ್ಗೆ ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಬಿಜೆಪಿ ತಮ್ಮ ಅಪೇಕ್ಷಿತ ವಾರ್ಡ್ ಗೆ ಅಗತ್ಯವಾದ ಮೀಸಲಾತಿಯನ್ನು ಮಾಡಿದೆ, ವಾರ್ಡ್ ಗಳ ವಿಭಜನೆಯನ್ನು ಸಹ ಅದೇ ರೀತಿಯಲ್ಲಿ ಮಾಡಲಾಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ