ಲಾಹೋರ್: 20 ವರ್ಷಗಳ ಹಿಂದೆ ಕೆಲಸದ ನಿಮಿತ್ತ ವಿದೇಶಕ್ಕೆ ತೆರಳಿ ನಾಪತ್ತೆಯಾಗಿದ್ದ 70 ವರ್ಷದ ಮುಂಬೈ ಮೂಲದ ಮಹಿಳೆಯೊಬ್ಬರು ಪಾಕಿಸ್ತಾನದಲ್ಲಿ ಜೀವಂತವಾಗಿ ಪತ್ತೆಯಾಗಿದ್ದಾರೆ.
ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಹೈದರಾಬಾದ್’ನಲ್ಲಿ ವಾಸವಾಗಿರುವ ಹಮೀದಾ ಬಾನು ಎಂಬ ಭಾರತೀಯ ಮಹಿಳೆ 20 ವರ್ಷಗಳ ಹಿಂದೆ ವಿದೇಶಕ್ಕೆ ತೆರಳಿದ ನಾಪತ್ತೆಯಾಗಿದ್ದು, ಇದೀಗ ಪಾಕಿಸ್ತಾನದಲ್ಲಿ ಪತ್ತೆಯಾಗಿದ್ದಾರೆ.
ಈ ಕುರಿತು ಆಕೆಯ ಸುದ್ದಿಯೊಂದು ಫೋಟೋ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗಿದ್ದು, ಕುಟುಂಸ್ಥರು ಆಕೆಯನ್ನು ಸಂಪರ್ಕಿಸಬಹುದೆಂದು ಮಾಧ್ಯಮ ಮನವಿಯಲ್ಲಿ ತಿಳಿಸಿದೆ.
ಸುಮಾರು 20 ವರ್ಷಗಳ ಹಿಂದೆ ಹಮೀದಾ ಬಾನು ಅವರು ದುಬೈನಲ್ಲಿ ಕೆಲಸಕ್ಕೆ ಹೋಗಲು 2002 ರಲ್ಲಿ ಮುಂಬೈಯನ್ನು ತೊರೆದಿದ್ದರು. ಮುಂಬೈಯ ಕುರ್ಲಾದಲ್ಲಿ ಕುಟುಂಬದೊಂದಿದೆ ವಾಸಿಸುತ್ತಿದ್ದ ಅವರು, ದುಬೈನಲ್ಲಿ ಮನೆ ಕೆಲಸಕ್ಕೆಂದು ಮುಂಬೈ ನಗರವನ್ನು ತೊರೆದಿದ್ದರು.