ಚಿಕ್ಕಮಗಳೂರು: ಉಪವಿಭಾಗಾಧಿಕಾರಿ ಡಾ.ನಾಗರಾಜ್‌ ವರ್ಗಾವಣೆ; ಮಂಡ್ಯ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಆಯ್ಕೆ

Prasthutha|

ಚಿಕ್ಕಮಗಳೂರು: ಉಪವಿಭಾಗಾಧಿಕಾರಿ ಡಾ.ಎಚ್‌.ಎಲ್‌. ನಾಗರಾಜ್‌ ಅವರನ್ನು ಮಂಡ್ಯ ಜಿಲ್ಲೆ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ವಿ.ಆರ್.ಶೈಲಜಾ ಅವರ ಜಾಗಕ್ಕೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

- Advertisement -


ಡಾ.ನಾಗರಾಜ್‌ ಅವರು ಉಪ ವಿಭಾಗಾಧಿಕಾರಿ ಕೋರ್ಟ್‌ನಲ್ಲಿ ದಾಖಲಾಗಿದ್ದ ಎಲ್ಲ ಅರೆ ನ್ಯಾಯಿಕ ಪ್ರಕರಣಗಳನ್ನುಪೂರ್ಣ ವಿಲೇವಾರಿ ಮಾಡಿ ರಾಜ್ಯದ ಗಮನ ಸೆಳೆದಿದ್ದ ರು.


ಖಾತೆ–ಪೋಡಿ ಅಭಿಯಾನ ನಡೆಸಿ ಬಹಳಷ್ಟು ಪ್ರಕರಣಗಳನ್ನು ಪರಿಹರಿಸಿದ್ದರು. ದಶಕಗಳಿಂದ ಬಾಕಿ ಇದ್ದ ಹಲವು ಪ್ರಕರಣಗಳಿಗೆ ಮುಕ್ತಿ ನೀಡಿದ್ದರು. ಶಾಲಾ ಜಾಗ ಖಾತಾ ಅಭಿಯಾನವನ್ನು ಈಚೆಗೆ ಆರಂಭಿಸಿ ಆಡಳಿತದಲ್ಲಿ ಚುರುಕು ಮೂಡಿಸಿದ್ದರು.

- Advertisement -


ನಾಗರಾಜ್‌ ಅವರನ್ನು ಕೆಲ ತಿಂಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆ ಹೆಚ್ಚುವರಿ ಜಿಲ್ಲಾಧಿಕಾರಿ ಹುದ್ದೆಗೆ ವರ್ಗಾವಣೆ ಮಾಡಿ, ನಂತರ ಆದೇಶವನ್ನು ವಾಪಸ್‌ ಪಡೆಯಲಾಗಿತ್ತು.



Join Whatsapp