ನವದೆಹಲಿ: ಸಂಸತ್ತಿನ ಕೆಳಮನೆಯಲ್ಲಿ ಅಂಗೀಕಾರವಾದ ನಿಲುವಳಿ ಸೂಚನೆಯ ನಂತರ ನಾಲ್ವರು ಕಾಂಗ್ರೆಸ್ ಸಂಸದರ ಅಮಾನತನ್ನು ಸೋಮವಾರ ಹಿಂದೆಗೆದುಕೊಳ್ಳಲಾಗಿದೆ.
ಲೋಕಸಭೆಯಿಂದ ಕಾಂಗ್ರೆಸ್ ಸಂಸದರ ಅಮಾನತನ್ನು ರದ್ದುಪಡಿಸಲಾಗಿದೆ ಎಂದು ಘೋಷಿಸಿದ ಸ್ಪೀಕರ್ ಓಂ ಬಿರ್ಲಾ, ಸದಸ್ಯರಿಗೆ ಕೊನೆಯ ಅವಕಾಶ ನೀಡಲಾಗುತ್ತಿದೆ. ಯಾವುದೇ ಫಲಕಗಳನ್ನು ಸದನದ ಒಳಗೆ ತರಬಾರದು. ಅಶಿಸ್ತು ಮಾಡಿದರೆ “ನಾನು ಸರ್ಕಾರ ಅಥವಾ ಪ್ರತಿಪಕ್ಷಗಳ ಮಾತನ್ನು ಕೇಳುವುದಿಲ್ಲ ಮತ್ತು ಖಂಡಿತವಾಗಿಯೂ ಕ್ರಮ ಕೈಗೊಳ್ಳುತ್ತೇನೆ” ಎಂದು ಅವರು ಎಚ್ಚರಿಸಿದರು.
ಜುಲೈ 26ರಂದು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ನಾಲ್ವರು ಕಾಂಗ್ರೆಸ್ ಸದಸ್ಯರನ್ನು ಅಶಿಸ್ತಿನ ವರ್ತನೆ ಮತ್ತು ಸದನದ ಕಾರ್ಯಕಲಾಪಗಳಿಗೆ ಅಡ್ಡಿಪಡಿಸಿದ ಆರೋಪದ ಮೇಲೆ ಅಮಾನತುಗೊಳಿಸಿದ್ದರು.