2024ರ ಚುನಾವಣೆಯಲ್ಲಿ ಮೋದಿಯೇ ಪ್ರಧಾನಿ ಅಭ್ಯರ್ಥಿ: ಅಮಿತ್ ಶಾ

Prasthutha|

ಪಾಟ್ನಾ: 2024 ರಲ್ಲಿ ಬಿಜೆಪಿ-ಜೆಡಿಯು ಒಟ್ಟಾಗಿ ಚುನಾವಣೆಯಲ್ಲಿ ಸ್ಪರ್ಧಿಸಲಿವೆ, ನರೇಂದ್ರ ಮೋದಿಯೇ ಮುಂದಿನ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ.

- Advertisement -

ಪಾಟ್ನಾದಲ್ಲಿ ಭಾನುವಾರ ನಡೆದ ವಿವಿಧ ಬಿಜೆಪಿ ಮೋರ್ಚಾಗಳ ಎರಡು ದಿನಗಳ ಜಂಟಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಅಮಿತ್ ಶಾ ವಹಿಸಿದ್ದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, 2024 ರ ಚುನಾವಣೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲೇ ಎದುರಿಸಲಾಗುವುದು ಮತ್ತು ಮೋದಿ ಮತ್ತೆ ದೇಶದ ಪ್ರಧಾನಿಯಾಗಲಿದ್ದಾರೆ ಎಂದು ಹೇಳಿದರು.

ದೇಶದ ಪ್ರತಿಯೊಂದು ಮೂಲೆಯಲ್ಲೂ ರಾಷ್ಟ್ರಧ್ವಜವನ್ನು ಹಾರಿಸಲಾಗುವುದು. ಸ್ವಾತಂತ್ರ್ಯಾನಂತರ, ಮೋದಿ ಸರ್ಕಾರದಲ್ಲಿ ಗ್ರಾಮ, ಬುಡಕಟ್ಟು ಪ್ರದೇಶಗಳು ಮತ್ತು ದಲಿತರಿಂದ ಗರಿಷ್ಠ ಸಂಖ್ಯೆಯ ಸಚಿವರನ್ನು ಮಾಡಲಾಗಿದೆ. ದೇಶದಲ್ಲಿ ದೇಶಭಕ್ತಿಯನ್ನು ಹೆಚ್ಚಿಸುವ ಅಗತ್ಯವಿದೆ. ಆಗಸ್ಟ್ 13 ರಿಂದ 15 ರವರೆಗೆ ಮೂರು ದಿನಗಳ ಕಾಲ ದೇಶದ ಮೂಲೆ ಮೂಲೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲಾಗುವುದು,ಇದನ್ನು ಬಿಜೆಪಿ ಕಾರ್ಯಕರ್ತರು ಖಚಿತಪಡಿಸಿಕೊಳ್ಳಲಿದ್ದಾರೆ ಎಂದು ಶಾ ಹೇಳಿದರು.

- Advertisement -

ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಮಹಿಳೆಯರು ತಯಾರಿಸಿದ ರಾಷ್ಟ್ರಧ್ವಜವನ್ನು ಎಲ್ಲಾ ಸದಸ್ಯರಿಗೆ ವಿತರಿಸಲಾಯಿತು. ಈ ಮೂಲಕ 370 ನೇ ವಿಧಿಯನ್ನು ತೆಗೆದುಹಾಕಿದ ನಂತರ, ಜಮ್ಮು ಮತ್ತು ಕಾಶ್ಮೀರದ ಜನರ ಆಲೋಚನೆ ಬದಲಾಗುತ್ತಿದೆ ಎಂಬ ಸಂದೇಶವನ್ನು ಕಳುಹಿಸುವ ಪ್ರಯತ್ನವನ್ನು ಮಾಡಲಾಯಿತು.



Join Whatsapp