ಕೊಲ್ಕತ್ತಾ: ನನ್ನನ್ನು ಶಿಕ್ಷಣ ಇಲಾಖೆಯ ಹಗರಣದಲ್ಲಿ ಸಿಲುಕಿಸಲಾಗಿದೆ ಎಂದು ಟಿಎಂಸಿಯಿಂದ ಹಾಗೂ ಪಶ್ಚಿಮ ಬಂಗಾಳ ಮಂತ್ರಮಂಡಲದಿಂದ ವಜಾಗೊಳಿಸಲ್ಪಟ್ಟಿರುವ ಪಾರ್ಥ ಚಟರ್ಜಿ ಎಂದು ಹೇಳಿದ್ದಾರೆ.
ಅವರ ಸಹಾಯಕಿ ಕೆಳಕ್ಕೆ ಬಿದ್ದು ಕಾಲಿಗೆ ಗಾಯ ಮಾಡಿಕೊಂಡಿದ್ದು, ಅವರನ್ನು ಸದ್ಯ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಲಾಗಿದೆ.
ನನ್ನ ವಿರುದ್ಧ ತೀವ್ರ ಸಂಚು ನಡೆಸಿ ಈ ಹಣದ ಅವ್ಯವಹಾರದಲ್ಲಿ ನನ್ನ ಹೆಸರನ್ನು ಎಳೆದು ತರಲಾಗಿದೆ ಎಂಬುದು ಮಾಜೀ ಮಂತ್ರಿ ಪಾರ್ಥ ಹೇಳಿಕೆಯಾಗಿದೆ.
ಗುರುವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು, ಪಾರ್ಥ ಚಟರ್ಜಿಯವರನ್ನು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಹುದ್ದೆಗಳಿಂದ ಕಿತ್ತು ಹಾಕಿದರು.
ಪಾರ್ಥ ಅವರನ್ನು ತೃಣಮೂಲ ಕಾಂಗ್ರೆಸ್ಸಿನ ಎಲ್ಲ ಹುದ್ದೆಗಳಿಂದ ಕಿತ್ತು ಹಾಕಿ ಅವರನ್ನು ಪಕ್ಷದಿಂದಲೂ ನಿನ್ನೆ ಹೊರ ಹಾಕಲಾಗಿದೆ. ಟಿಎಂಸಿ ವಕ್ತಾರ ಕುಣಾಲ್ ಘೋಷ್ ಅವರು ಕೂಡಲೆ ಪಾರ್ಥರನ್ನು ಕಿತ್ತು ಹಾಕಿ ಎಂದು ಹೇಳಿದ ಒಂದು ಗಂಟೆಯೊಳಗೆ ಅವರನ್ನು ಪಕ್ಷದ, ಸರಕಾರದ ಎಲ್ಲ ಹುದ್ದೆಗಳಿಂದಲೂ ಬಿಡಿಸಲಾಗಿದೆ.