ಹತ್ತನೆಯ ದಿನವೂ ನಡೆಯದ ಸಂಸತ್ ಕಲಾಪ: ಉಭಯ ಸದನ ಸೋಮವಾರಕ್ಕೆ ಮುಂದೂಡಿಕೆ

Prasthutha|

ನವದೆಹಲಿ: ಮುಂಗಾರು ಅಧಿವೇಶನ ಆರಂಭವಾಗಿ ಇಂದಿಗೆ ಹತ್ತನೆಯ ದಿನ. ಎಂದಿನಂತೆಯೇ ಇಂದು ಕೂಡ ಮೊದಲು ಹನ್ನೆರಡು ಗಂಟೆವರೆಗೆ, ನಂತರ ಸೋಮವಾರಕ್ಕೆ ಎರಡೂ ಸದನಗಳ ಕಲಾಪಗಳು ಮುಂದೂಡಲ್ಪಟ್ಟವು.

- Advertisement -

ಹತ್ತನೆಯ ದಿನವೂ ಯಾವುದೇ ಕ್ರಮಬದ್ಧ ಕಲಾಪವು ನಡೆಯಲಿಲ್ಲ. ಪ್ರತಿಪಕ್ಷ ಸದಸ್ಯರು ಬೆಲೆಯೇರಿಕೆ ಮೊದಲಾದವುಗಳ ಚರ್ಚೆಗೆ ಪಟ್ಟು ಹಿಡಿದರೆ, ಬಿಜೆಪಿ ಸದಸ್ಯರು ಅಧೀರ್ ರಂಜನ್ ಚೌಧರಿಯವರು ರಾಷ್ಟ್ರಪತಿ ವಿವಾದಕ್ಕಾಗಿ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದರು. ಎರಡು ಬಾರಿ ಸಮಾವೇಶಗೊಂಡಾಗಲೂ ಗದ್ದಲ ಹೆಚ್ಚಾಗಿದ್ದರಿಂದ ಸ್ಪೀಕರ್ ಕಲಾಪವನ್ನು ಸೋಮವಾರ ಬೆಳಿಗ್ಗೆ 11 ಗಂಟೆಗೆ ಮುಂದೂಡಿದರು.

ಡಾ. ಸಸ್ಮಿತ್ ಪಾತ್ರ ಸಭಾಪತಿ ಸ್ಥಾನದಲ್ಲಿದ್ದು, ರಾಜ್ಯ ಸಭೆಯು ಪ್ರಶ್ನೋತ್ತರ ಕಲಾಪ ಆರಂಭವಾಯಿತು. ಪ್ರತಿಪಕ್ಷಗಳವರು ಸದನದ ಬಾವಿಗಿಳಿದು ಫಲಕ ಪ್ರದರ್ಶಿಸಿ ಘೋಷಣೆ ಕೂಗಿದರು.

Join Whatsapp