►“ಸುವರ್ಣ ಟಿವಿ ವಿರುದ್ಧ ಮಾನನಷ್ಟ ಮೊಕದ್ದಮೆ” ಎಂದ ಮಾಜಿ ಶಾಸಕ
ಮಂಗಳೂರು: ಲವ್ ವಿಷಯದಲ್ಲಿ 2ಗುಂಪುಗಳ ನಡುವೆ ಮಾರಾಮಾರಿ ನಡೆದು ಸುರತ್ಕಲ್’ನಲ್ಲಿ ಫಾಝಿಲ್ ಹತ್ಯೆ ನಡೆದಿದೆ ಎಂದು ಸುಳ್ಳು ಸುದ್ದಿ ವರದಿ ಮಾಡಿದ ಸುವರ್ಣ ನ್ಯೂಸ್
ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಮಾಜಿ ಶಾಸಕ ಮೊಯ್ದಿನ್ ಬಾವ ಹೇಳಿದ್ದಾರೆ.
ಗುರುವಾರ ರಾತ್ರಿ ಫಾಝಿಲ್ ಎಂಬ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು, ಇದಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆ ಇನ್ನೂ ಆಗಿಲ್ಲ. ಆದರೆ ಸುವರ್ಣ ನ್ಯೂಸ್ ಆ ವರದಿಯನ್ನು ತಿರುಚಿ ಲವ್ ವಿಷಯದಲ್ಲಿ ಕೊಲೆಯಾಗಿದೆ ಎಂದು ಸುದ್ದಿ ಬಿತ್ತರಿಸಿದೆ.
ಅಲ್ಲದೆ, ಮಾಜಿ ಶಾಸಕ ಮೊಯ್ದಿನ್ ಬಾವ ಅವರು ಈ ಹೇಳಿಕೆಯನ್ನು ನೀಡಿದ್ದಾರೆ ಎಂದು ಸುವರ್ಣ ಟಿವಿ ವರದಿ ಬಿತ್ತರಿಸಿತ್ತು.
ಈ ಬಗ್ಗೆ ಮಾತನಾಡಿದ ಮಾಜಿ ಶಾಸಕ ಮೊಯ್ದಿನ್ ಬಾವ ನನ್ನ ಹೇಳಿಕೆ ತಿರುಚಿದ್ದಾರೆ. ಸುವರ್ಣ ಟಿವಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂರುತ್ತೇನೆ ಎಂದು ಹೇಳಿದ್ದಾರೆ.
ಲವ್ ಅಥವಾ ಇನ್ನಾವುದೇ ವಿಷಯಕ್ಕೆ ಕೊಲೆ ನಡೆದಿದೆ ಎಂಬುದು ಸುಳ್ಳು. ಈ ಬಗ್ಗೆ ಯಾರು ಕೂಡ ದೂರು ನೀಡಿಲ್ಲ. ಕೊಲೆಗೆ ನಿಖರ ಕಾರಣವನ್ನು ನಾವು ತನಿಖೆಯಿಂದ ಪತ್ತೆಯಾದ ಬಳಿಕ ಮಾಧ್ಯಮಗಳಿಗೆ ತಿಳಿಸುತ್ತೇವೆ ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.