ಪ್ರವೀಣ್ ಕೊಲೆ ಪ್ರಕರಣ; ಬಿಜೆಪಿಯಲ್ಲಿ ಶುರುವಾಯ್ತು ರಾಜೀನಾಮೆ ಟ್ರೆಂಡ್

Prasthutha|

ಚಿಕ್ಕಮಗಳೂರು: ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ  ಪ್ರವೀಣ್ ನೆಟ್ಟಾರು ಹತ್ಯೆಯಿಂದಾಗಿ ಬಿಜೆಪಿಯ ಬಗ್ಗೆನಿರಾಶರಾಗಿರುವ ಬಿಜೆಪಿ ಕಾರ್ಯಕರ್ತರು ರಾಜೀನಾಮೆ ಅಭಿಯಾನ ಶುರು ಹಚ್ಚಿದ್ದಾರೆ.

- Advertisement -

ಚಿಕ್ಕಮಗಳೂರು ಬಿಜೆಪಿ ಯುವ ಮೋರ್ಚಾ ಮಾಧ್ಯಮ ಪ್ರಮುಖರಾದ ಪ್ರೀತಂ ಹೆಬ್ಬಾರ್ ಎಂಬವರು ಜಿಲ್ಲಾಧ್ಯಕ್ಷ ಸಂದೀಪ್ ಹರವಿನಂಗಡಿ ಅವರಿಗೆ  ರಾಜೀನಾಮೆ ಪತ್ರ ರವಾನಿಸಿದ್ದಾರೆ.

ಕಠಿಣ ಕ್ರಮದ ಹೇಳಿಕೆಗಷ್ಟೆ ಬಿಜೆಪಿ ಸರ್ಕಾರ ಇದೆ. ಕಾರ್ಯಕರ್ತರ ಜೀವದ ಜೊತೆ ಚೆಲ್ಲಾಟ ಆಡ್ತಿದ್ದಾರೆ. ವಾಜಪೇಯಿ, ಅಡ್ವಾಣಿ ಹೆಸರನ್ನು ಹಾಳು ಮಾಡಲಾಗುತ್ತಿದ್ದು, ಅವರು ಕಟ್ಟಿದ ಪಕ್ಷಕ್ಕೆ ಅವಮಾನ ಮಾಡದೇ ಇನ್ನು ಮುಂದಾದರೂ ಬಿಜೆಪಿ ಕಾರ್ಯಕರ್ತರನ್ನು ಉಳಿಸಿಕೊಂಡು ಹತ್ಯೆ ಮಾಡುವವರ ವಿರುದ್ಧ ರಾಜ್ಯದಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ,

- Advertisement -

ಇನ್ನೂ ಹಲವು ಬಿಜೆಪಿ ಕಾರ್ಯಕರ್ತರು ಪಕ್ಷದಲ್ಲಿರುವ  ತಮ್ಮ ಹುದ್ದೆಗೆ ರಾಜೀನಾಮೆ ನೀಡಲು ಮುಂದಾಗಿದ್ದು, ಬಿಜೆಪಿ ಸರ್ಕಾರದಿಂದ ಕಾರ್ಯಕರ್ತರಿಗೆ ಯಾವುದೇ ಅಭಯ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೊಂಡು ರಾಜೀನಾಮೆ ಅಭಿಯಾನ ಶುರು ಮಾಡಿದ್ದಾರೆ.



Join Whatsapp