ಬಲ ಇಲ್ಲದ ಸಿಎಂ, ನರ ಇಲ್ಲದ ಗೃಹ ಮಂತ್ರಿ: ಬಿಜೆಪಿ ಕಾರ್ಯಕರ್ತರಿಂದಲೇ ಆಕ್ರೋಶ

Prasthutha|

ಬಿಲ್ಲವರು ಇನ್ಮುಂದೆಯಾದರೂ ಬುದ್ಧಿ ಕಲಿಯಬೇಕು

- Advertisement -


ಮಂಗಳೂರು: ಬೆಳ್ಳಾರೆಯಲ್ಲಿ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಸಂಬಂಧ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


ಪ್ರವೀಣ್ ಹತ್ಯೆ ಖಂಡಿಸಿ ಸಿಎಂ ಆದಿಯಾಗಿ ಬಿಜೆಪಿಯ ಸಚಿವರು, ಶಾಸಕರು, ಸಂಸದರು ಮತ್ತು ನಾಯಕರು ಮಾಡಿರುವ ಪೋಸ್ಟ್ ಗಳಿಗೆ ಕಮೆಂಟ್ ಮಾಡುತ್ತಿರುವ ಬಿಜೆಪಿ ಕಾರ್ಯಕರ್ತರು ಹಿಗ್ಗಾಮುಗ್ಗ ಜಾಡಿಸುತ್ತಿದ್ದಾರೆ.

- Advertisement -


ಬಲ ಇಲ್ಲದ ಮುಖ್ಯಮಂತ್ರಿ ನರ ಇಲ್ಲದ ಗೃಹ ಮಂತ್ರಿ ಅಧಿಕಾರದಲ್ಲಿರುವುದರಿಂದ ಹಿಂದೂಗಳ ಹತ್ಯೆ ಮುಂದುವರೆದಿದೆ. ಬಿಜೆಪಿ ನಾಯಕರು ಸಾವಿನಲ್ಲೂ ರಾಜಕೀಯ ಲಾಭ ಪಡೆಯಲು ಚೆನ್ನಾಗಿ ಕಲಿತ್ತಿದ್ದಾರೆ.
ಜಾತಿ ಲೆಕ್ಕಾಚಾರದ ಮುಂದೆ ಇವರಿಗೆ ಬಿಜೆಪಿ ಕಾರ್ಯಕರ್ತರ ಸಾವು ದೊಡ್ಡದಲ್ಲ, ಕೇವಲ ಬಿಲ್ಲವರು ಮಾತ್ರ ರಾಜಕೀಯ ಲಾಭಕ್ಕಾಗಿ ಬಲಿಯಾಗುತ್ತಿದ್ದಾರೆ. ಹಿಂದೂ ಯುವಕರ ಕೊಲೆಯಾದಾಗ ಕೇವಲ ಕಠಿಣ ಕ್ರಮ ಜರುಗಿಸುತ್ತೇವೆ ಎಂದು ಹೇಳಿ ಕಾಲಹರಣ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರದ ಕೈಯಲ್ಲಿ ಏನು ಆಗಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೋದಿ ಮುಖನೋಡಿ ಸುಮ್ಮನಿರೋಣ ಆಲೋಚನೆ ಬಿಟ್ಟು ಬಿಡಿ, ನಾಳೆ ಇನ್ನೊಂದು ಹೆಣ ಬಿದ್ದರೆ ಮೋದಿಗೆ ಏನೂ ನಷ್ಟ ಇಲ್ಲ ನಮ್ಮ ಮನೆಗೆ ನಷ್ಟ. ಬಿಜೆಪಿಯ ಕಾರ್ಯಕರ್ತರೇ ಬಿಜೆಪಿಗೆ ಸರ್ಕಾರಕ್ಕೆ ತಕ್ಕ ಪಾಠ ಕಲಿಸುವ ಸಮಯ ಬಂದಿದೆ ಎಂದು ಬಿಜೆಪಿ ಕಾರ್ಯಕರ್ತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.


ಕರಾವಳಿಯಲ್ಲಿ ಬಿಜೆಪಿಯ ರಾಜಕೀಯಕ್ಕಾಗಿ ಜೀವ ಕಳೆದುಕೊಂಡ ಹೆಚ್ಚಿನ ಯುವಕರು ಬಿಲ್ಲವ ಸಮುದಾಯದವರು. ಇನ್ನಾದರೂ ಬಿಲ್ಲವ ಸಮುದಾಯ ಯುವಕರು ಬುದ್ಧಿ ಕಲಿಯಬೇಕು ಎಂದು ಮತ್ತೊಬ್ಬರು ಕಿವಿಮಾತು ಹೇಳಿದ್ದಾರೆ.
ಕಾರ್ಯಕರ್ತರ ಹೆಣ ಮೇಲೆ ಅಧಿಕಾರ ನಡೆಸುತ್ತಿರುವ ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷ ಬಿಜೆಪಿ ಎಂದು ಕಿಡಿಕಾರಿದ್ದಾರೆ. ಗ್ರಾಮ ಪಂಚಾಯಿತಿಯಿಂದ ಹಿಡಿದು ಕೇಂದ್ರ ಸರ್ಕಾರದ ತನಕ ಬಿಜೆಪಿಯೇ ಅಧಿಕಾರದಲ್ಲಿದ್ದರೂ ಬಿಜೆಪಿ ಕಾರ್ಯಕರ್ತರಿಗೆ ರಕ್ಷಣೆ ಇಲ್ಲ. ಬೆಜಿಪಿ ಕಾರ್ಯಕರ್ತರಿಗೆ ರಕ್ಷಣೆ ನೀಡಲು ಸಾಧ್ಯ ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ತೊಲಗಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.



Join Whatsapp