ದಾಳಿಕೋರರಿಗೆ ಮುಖ್ಯಮಂತ್ರಿಯ ‘ಆ’ ಹೇಳಿಕೆಯೇ ಪ್ರೇರಣೆ
ಮಂಗಳೂರು: ನಿನ್ನೆ ನಗರದಲ್ಲಿ ನಡೆದ ಪಬ್ ಒಳನುಗ್ಗಿ ನಡೆಸಿದ ದಾಂಧಲೆಯು ಹಫ್ತಾ ವಸೂಲಿಗಾಗಿ ನಡೆದ ದಾಳಿಯಾಗಿದೆ ಎಂದು ನನಗನಿಸುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಯುಟಿ ಖಾದರ್ ಶಂಕೆ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಬಳಿಕ ಇಂತಹ ಉದ್ದಿಮೆದಾರರು ಬಹಳಷ್ಟು ಆರ್ಥಿಕ ತೊಂದರೆ ಅನುಭವಿಸಿದ್ದಾರೆ. ಅವರು ಲೈಸನ್ಸ್ ಗೆ ಹಣ ಪಾವತಿಸಬೇಕು, ತೆರಿಗೆ ಕಟ್ಟಬೇಕು. ಬಳಿಕ ಇಂತಹ ದಾಳಿಯನ್ನೂ ಸಹಿಸಬೇಕು ಎಂದರೆ ಹೇಗೆ ಎಂದು ಆತಂಕ ವ್ಯಕ್ತಪಡಿಸಿದರು.
ಇಂತಹ ಘಟನೆಗಳು ಬ್ರ್ಯಾಂಡ್ ಮಂಗಳೂರಿಗೆ ಅತಿ ದೊಡ್ಡ ಹೊಡೆತ ನೀಡಲಿದ್ದು, ಇಂತಹ ದಾರಿತಪ್ಪಿದ ಯುವಕರ ಕೃತ್ಯದಿಂದ ನಗರದ ಆರ್ಥಿಕ ಬೆಳವಣಿಗೆಗೆ ಹೊಡೆತ ಬೀಳಲಿದೆ ಎಂದರು.
ಇಂತಹ ಘಟನೆಗಳಿಗೆ ಮುಖ್ಯಮಂತ್ರಿ ಇತ್ತೀಚೆಗೆ ನೀಡಿರುವ reaction for the action ಎಂಬ ಹೇಳಿಕೆಯೇ ಕಾರಣವಾಗಿದ್ದು, ಇದರಿಂದ ಪ್ರೇರಿತರಾದವರೇ ಈ ಕೃತ್ಯ ನಡೆಸಿದ್ದಾರೆ ಯುಟಿ ಖಾದರ್ ತಿಳಿಸಿದರು.