ಕೊಚ್ಚಿ: ಕೇರಳದ 35 ವರುಷದ ಶೈಜಾ ಲಿಂಗ ಹೆಮ್ಮೆಯಿಂದ ಮೀಸೆ ಬಿಟ್ಟುಕೊಂಡು ಓಡಾಡುತ್ತಾರೆ.
“ನಾನು ನನ್ನ ಮೀಸೆಯನ್ನು ಪ್ರೀತಿಸುತ್ತೇನೆ” ಎಂದು ತನ್ನ ವಾಟ್ಸಪ್ ಸ್ಟೇಟಸ್ ನಲ್ಲಿ ಶೈಜಾ ಮೀಸೆ ತಿರುವಿದ್ದಾರೆ.
ಶೈಜಾರ ಕಣ್ಣೂರು ಜಿಲ್ಲೆಯವರು.
“ನಾನು ಯಾವತ್ತೂ ಸುಂದರವಾಗಿಲ್ಲ ಎಂದು ಅಂದುಕೊಂಡಿಲ್ಲ. ಏನೋ ವಿಶೇಷವಾದುದನ್ನು ನಾನು ಹೊಂದಿದ್ದೇನೆ. ಏನಿಲ್ಲದಿರುವುದಕ್ಕಿಂತ ಅದು ಒಳ್ಳೆಯದು” ಎಂದು ಶೈಜಾ ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಎಲ್ಲರೂ ಆಕೆಯ ಮೇಲೆ ಕರುಣೆ ಹೊಂದಿಲ್ಲ. ಹಲವರು ಶೈಜಾರನ್ನು ಟ್ರೋಲ್ ಮಾಡಿದ್ದಾರೆ. ಕೆಲವರು ಗಂಡಸರಂತೆ ಯಾಕೆ ಮೀಸೆ ಬಿಟ್ಟಿದ್ದೀರಿ ಎಂದಿದ್ದಾರೆ. ಅದಕ್ಕೆ ಶೈಜಾ ಅದು ನನ್ನ ಮುಖದ ಮೇಲೆ ಬಂದಿದೆ, ಬಿಡುವುದು ನನ್ನ ಇಷ್ಟ ಎಂದು ತಿರುಗೇಟು ನೀಡಿದ್ದಾರೆ.
ಕೊರೋನಾ ಕಾಲದಲ್ಲಿ ಎಲ್ಲರೂ ಮುಖಗವುಸು ಧರಿಸಿದರು. ಅದು ನನಗೆ ಹಿಡಿಸಲಿಲ್ಲ. ಏಕೆಂದರೆ ನನ್ನ ಮೀಸೆ ಹೊರಗೆ ಕಾಣಿಸುತ್ತಿರಲಿಲ್ಲ ಎನ್ನುತ್ತಾರೆ ಶೈಜಾ. ಅವರ ಮಗಳು ಕೂಡ ತಾಯಿಯ ಮೀಸೆಗೆ ಬೆಂಬಲವಾಗಿದ್ದಾರೆ. ನಿಮಗೆ ಮೀಸೆ ಚೆನ್ನಾಗಿದೆ ಎನ್ನುತ್ತಾಳಂತೆ ಮಗಳು.
ಮೊಲೆ ಜಾಲ, ಗರ್ಭಕೋಶದ ಸಿಸ್ಟ್, ಹಿಸ್ಟಿರಿಯೋಟಮಿ ಎಂದು ಆರು ಬಾರಿ ಶೈಜಾ ಹಾರ್ಮೋನ್ ಸಂಬಂಧಿ ತೊಂದರೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಎಷ್ಟೇ ನೋವಾದರೂ ಮೀಸೆ ತಿರುಗಿಸುವುದು ಬಿಡುವುದಿಲ್ಲ ಎನ್ನುತ್ತಾರೆ.